ಪೋಷಕರ ಮೇಲಿನ ಸೇಡಿಗೆ ಅವರ 11 ವರ್ಷದ ಮಗನ ಬಲಿ ಪಡೆದ ಪಕ್ಕದಮನೆಯಾತ

Webdunia
ಮಂಗಳವಾರ, 28 ಮೇ 2019 (08:44 IST)
ನವದೆಹಲಿ : ತಂದೆ ತಾಯಿ ಬೈದಿದ್ದಕ್ಕೆ ಅವರ 11 ವರ್ಷದ ಮಗನನ್ನು ಕತ್ತು ಹಿಸುಕಿ ಕೊಂದ ಅಮಾನವೀಯ ಘಟನೆ ದೆಹಲಿಯಲ್ಲಿ ನಡೆದಿದೆ.



ಈಶಾನ್ಯ ದೆಹಲಿಯ ನೆಹರೂ ವಿಹಾರ್ ನಿವಾಸಿ ಡ್ಯಾನಿಷ್(28) ಕೊಲೆ ಮಾಡಿದ ಆರೋಪಿಯಾಗಿದ್ದು, ಈತ ಹಾಗೂ ಬಾಲಕ ಅಕ್ಕಪಕ್ಕದ ಮನೆಯಲ್ಲಿ ವಾಸಿಸುತ್ತಿದ್ದರಿಂದ ಒಡನಾಟ ಚೆನ್ನಾಗಿಯೇ ಇತ್ತು. ಆದರೆ ಒಮ್ಮೆ ಬಾಲಕನ ತಂದೆತಾಯಿ ಡ್ಯಾನಿಷ್ ಗೆ ಬೈದಿದ್ದರು.ಇದರಿಂದ ಕೋಪಗೊಂಡಿದ್ದ ಡ್ಯಾನಿಷ್ ಅವರ ಮೇಲೆ ಸೇಡು ತೀರಿಸಿಕೊಳ್ಳಲು ಬಾಲಕನನ್ನು ತನ್ನೊಡನೆ ಕರೆದೊಯ್ದು, ಖಜುರಿ ಖಾಸ್ ಫ್ಲೈಓವರ್ ಬಳಿ ಇರುವ ನಿರ್ಜನ ಪ್ರದೇಶದಲ್ಲಿ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಹಾಗೆಯೇ ಶವವನ್ನು ಅಲ್ಲಿಯೆ ಹೂತಿದ್ದಾನೆ.

 

ಬಾಲಕ ಕಾಣಿಯಾದ ಹಿನ್ನಲೆಯಲ್ಲಿ ಆತನ ಪೋಷಕರು ಪೊಲೀಸರಿಗೆ ದೂರು ನೀಡಿದ್ದು, ಈ ಬಗ್ಗೆ ತನಿಖೆ ನಡೆಸುತ್ತಿರುವಾಗ ಬಾಲಕನ ಶವ ಪತ್ತೆಯಾಗಿದೆ. ನಂತರ ಪೊಲೀಸರು ಅಂಗಡಿಯೊಂದರ ಸಿಸಿಟಿವಿ ಪರಿಶೀಲನೆ ನಡೆಸಿದಾಗ ಡ್ಯಾನಿಷ್ ಜೊತೆ ಬಾಲಕ ಹೋಗುತ್ತಿದ್ದ ದೃಶ್ಯ ಸೆರೆಯಾಗಿತ್ತು. ಬಳಿಕ ಡ್ಯಾನಿಷ್‍ನನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸಿದಾಗ ಆತ ಸತ್ಯಾಂಶವನ್ನು ಬಾಯ್ಬಿಟ್ಟಿದ್ದಾನೆ.

 

 

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಎಸ್ಎಸ್ಎಲ್ ಸಿ, ಪಿಯುಸಿ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: ಪಾಸಿಂಗ್ ಅಂಕದಲ್ಲಿ ಭಾರೀ ಬದಲಾವಣೆ

Video: ಆರ್ ಎಸ್ಎಸ್ ಹೀಗೆ ಬೆದರಿಕೆ ಹಾಕುತ್ತದೆ ಎಂದು ಅಡಿಯೋ ಬಾಂಬ್ ಹಾಕಿದ ಪ್ರಿಯಾಂಕ್ ಖರ್ಗೆ

ರಸ್ತೆ ಸರಿ ಮಾಡಿ ಎಂದರೆ ಉದ್ಯಮಿಗಳಿಗೇ ಬೆದರಿಸುವ ಕಾಂಗ್ರೆಸ್ ಸರ್ಕಾರ: ಸಿಟಿ ರವಿ

Gold Price: ಚಿನ್ನದ ದರ ಇಂದು ಎಷ್ಟಾಗಿದೆ ನೋಡಿ

ರಸ್ತೆಗೆ ಡಾಂಬರು ಹಾಕ್ತಿದ್ದೀವಿ ನೋಡ್ಕೊಳ್ಳಿ ಎಂದ ಡಿಕೆ ಶಿವಕುಮಾರ್

ಮುಂದಿನ ಸುದ್ದಿ
Show comments