Select Your Language

Notifications

webdunia
webdunia
webdunia
webdunia

'ಕರ್ಮ ಪೂಜೆ'ಯ ವೇಳೆ ಕೆರೆಗಿಳಿದ ಏಳು ಬಾಲಕಿಯರು ಸಾವು

'ಕರ್ಮ ಪೂಜೆ'ಯ ವೇಳೆ ಕೆರೆಗಿಳಿದ ಏಳು ಬಾಲಕಿಯರು ಸಾವು
ರಾಂಚಿ , ಭಾನುವಾರ, 19 ಸೆಪ್ಟಂಬರ್ 2021 (10:57 IST)
ರಾಂಚಿ : ಜಾರ್ಖಂಡ್ ನ ಲತೇಹಾರ್ ಜಿಲ್ಲೆಯ ಬಾಲುಮಠದಲ್ಲಿ ಶನಿವಾರ ಕರ್ಮ ಪೂಜೆಯ ಬಳಿಕ ನೀರಿನಲ್ಲಿ ಇಳಿದ ಸಂದರ್ಭದಲ್ಲಿ ನೀರಿನಲ್ಲಿ ಮುಳುಗಿ 12 ರಿಂದ 20 ವರ್ಷ ವಯಸ್ಸಿನ ಏಳು ಹುಡುಗಿಯರು ಮೃತಪಟ್ಟಿದ್ದಾರೆ. ಸತ್ತವರಲ್ಲಿ ಆರು ಮಂದಿ ಒಂದೇ ಕುಟುಂಬಕ್ಕೆ ಸೇರಿದವರು.
Photo Courtesy: Google

ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ದುರಂತ ಅಪಘಾತದ ಬಗ್ಗೆ 'ಆಘಾತ' ವ್ಯಕ್ತಪಡಿಸಿದ್ದಾರೆ.
ಜಾರ್ಖಂಡ್ ನ ಪ್ರಮುಖ ಹಬ್ಬವಾದ ಕರ್ಮ ಪೂಜಾ ನಂತರ ಹುಡುಗಿಯರು ಕೊಳಕ್ಕೆ ಹೋಗಿದ್ದಾಗ ಬಾಲುಮಠ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಶೆರೆಗಡ ವ್ಯಾಪ್ತಿಯ ಬುಕ್ರು ಗ್ರಾಮದ ಮನಂದಿಹ್ ತೋಲಾದಲ್ಲಿ ಈ ದುರಂತ ನಡೆದಿದೆ. ದುರಂತ ಘಟನೆಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಆಘಾತ ವ್ಯಕ್ತಪಡಿಸಿದ್ದಾರೆ.
ಕರ್ಮಪೂಜೆ ಬಳಿಕ ಪೂಜಾ ಸಾಮಗ್ರಿ ವಿಸರ್ಜನೆಗೆ ಕೆರೆಗೆ ಇಳಿದಿದ್ದಾಗ ದುರಂತ ಸಂಭವಿಸಿದೆ. 10 ಬಾಲಕಿಯರು 'ಕರ್ಮ ದಾಲಿ' ವಿಸರ್ಜನೆಗೆ ಕೆರೆಗೆ ತೆರಳಿದ್ದ ವೇಳೆ ಒಬ್ಬಾಕೆ ಕಾಲು ಜಾರಿ ನೀರಿನಲ್ಲಿ ಬಿದ್ದಾಗ ರಕ್ಷಿಸಲು ಹೋದ ಉಳಿದವರೂ ಒಬ್ಬೊಬ್ಬರಾಗಿ ನೀರಿನ ಸೆಳೆತಕ್ಕೆ ಸಿಕ್ಕಿ ಮುಳುಗಿದ್ದಾರೆ. ಬಲುಮಠ್ ಪೊಲೀಸ್ ಠಾಣೆ ವ್ಯಾಪ್ತಿಯ ಬುಕ್ರು ಗ್ರಾಮದಲ್ಲಿ ಘಟನೆ ನಡೆದಿದೆ.
ಜಾರ್ಖಂಡ್ ಮುಖ್ಯಮಂತ್ರಿ ಹೇಮತ್ ಸೊರೇನ್ ಅವರು ಘಟನೆಯ ಬಗ್ಗೆ ಆಘಾತ ವ್ಯಕ್ತಪಡಿಸಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ದೇಶೀಯ ವಿಮಾನಗಳ ಗರಿಷ್ಠ ಶೇಕಡಾ 85 ರಷ್ಟನ್ನು ನಿರ್ವಹಿಸಬಹುದು : ಕೇಂದ್ರ