ನವದೆಹಲಿ: ಪ್ರಧಾನಿ ಮೋದಿಯವರ ತಾಯಿಯ ಎಐ ವಿಡಿಯೋ ಹಾಕಿಕೊಂಡು ಸೋಷಿಯಲ್ ಮೀಡಿಯಾದಲ್ಲಿ ಟೀಕೆ ಮಾಡಿದ್ದ ಕಾಂಗ್ರೆಸ್ ಗೆ ಮುಖಭಂಗವಾಗಿದೆ.
ತಕ್ಷಣವೇ ಮೋದಿ ತಾಯಿ ದಿವಂಗತ ಹೀರಾಬೆನ್ ಅವರನ್ನೊಳಗೊಂಡ ಎಐ ವಿಡಿಯೋವನ್ನು ತಕ್ಷಣವೇ ತೆಗೆದು ಹಾಕುವಂತೆ ಪಾಟ್ನಾ ಹೈಕೋರ್ಟ್ ಕಾಂಗ್ರೆಸ್ ಪಕ್ಷಕ್ಕೆ ತಾಕೀತು ಮಾಡಿದೆ. ತಕ್ಷಣವೇ ಎಲ್ಲಾ ಸೋಷಿಯಲ್ ಮೀಡಿಯಾ ಪುಟಗಳಿಂದ ವಿಡಿಯೋ ತೆಗೆದು ಹಾಕಲು ಸೂಚಿಸಿದೆ.
ಮೋದಿಯವರ ದಿವಂಗತ ತಾಯಿಯವರ ಬಗ್ಗೆ ಎಐ ವಿಡಿಯೋ ಮಾಡಿದ್ದು ಭಾರೀ ವಿವಾದಕ್ಕೆ ಕಾರಣವಾಗಿತ್ತು. ಆದರೆ ನಾವು ವಿಡಿಯೋದಲ್ಲಿ ಹೀರಾಬೆನ್ ಅವರಿಗೆ ಅಗೌರವ ತೋರಿಲ್ಲ ಎಂದು ಕಾಂಗ್ರೆಸ್ ಸಮರ್ಥಿಸಿಕೊಂಡಿತ್ತು. ಆದರೆ ಈಗ ಸ್ವತಃ ಕೋರ್ಟ್ ಆ ವಿಡಿಯೋ ತೆಗೆದು ಹಾಕಲು ಸೂಚಿಸಿದೆ.
ಈ ಮೂಲಕ ಕಾಂಗ್ರೆಸ್ ಗೆ ಹಿನ್ನಡೆಯಾಗಿದೆ. ರಾಜಕೀಯ ಉದ್ದೇಶಕ್ಕಾಗಿ ನನ್ನ ದಿವಂಗತ ತಾಯಿಯವರನ್ನೂ ಬಳಸಲಾಗುತ್ತಿದೆ ಎಂದು ಪ್ರಧಾನಿ ಮೋದಿ ಬೇಸರಿಸಿಕೊಂಡಿದ್ದರು. ಇಂದು ಅವರ ಜನ್ಮದಿನವಾಗಿದ್ದು ಇದೇ ದಿನ ಅವರಿಗೆ ಕೋರ್ಟ್ ನಿಂದ ಸಿಹಿ ಸುದ್ದಿ ಸಿಕ್ಕಿದೆ.