ನವದೆಹಲಿ: ಪ್ರಧಾನಿ ನರೇಂದ್ರ ಮೋದಿಗೆ ಇಂದು 75 ನೇ ಜನ್ಮದಿನದ ಸಂಭ್ರಮ. ಈ ಶುಭ ದಿನದಂದೇ ಅವರು ಮಹತ್ವದ ಕೆಲಸವೊಂದನ್ನು ಮಾಡಲಿದ್ದಾರೆ. ಅದೇನೆಂದು ಇಲ್ಲಿದೆ ನೋಡಿ ವಿವರ.
ಮೂರನೇ ಬಾರಿಗೆ ದೇಶದ ಪ್ರಧಾನಿಯಾಗಿ ದಾಖಲೆ ಮಾಡಿರುವ ಪ್ರಧಾನಿ ಮೋದಿ ಇಂದು 75 ನೇ ವಯಸ್ಸಿಗೆ ಕಾಲಿಡುತ್ತಿದ್ದಾರೆ. 1950 ರಲ್ಲಿ ವಡ್ನಾಗರ್ ನಲ್ಲಿ ಜನಿಸಿದ ನರೇಂದ್ರ ದಾಮೋದರ ದಾಸ್ ಮೋದಿ ಇಂದು 75 ನೇ ವಸಂತಕ್ಕೆ ಕಾಲಿಡುತ್ತಿದ್ದಾರೆ.
ಮೋದಿ ಜನ್ಮದಿನಕ್ಕೆ ಬಿಜೆಪಿ ಹಲವು ಸಮಾಜಮುಖೀ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಆದರೆ ಸ್ವತಃ ಮೋದಿ ಇಂದು ಮಹತ್ವದ ಯೋಜನೆಯೊಂದಕ್ಕೆ ಚಾಲನೆ ನೀಡಲಿದ್ದಾರೆ. ಮೋದಿ ಇಂದು ಮಧ್ಯಪ್ರದೇಶಕ್ಕೆ ಭೇಟಿ ನೀಡಲಿದ್ದು ದೇಶದ ಅತೀ ದೊಡ್ಡ ಪಿಎಂ ಮಿತ್ರ ಜವಳಿ ಉದ್ಯಾನವನವನ್ನು ಉದ್ಘಾಟಿಸಲಿದ್ದಾರೆ. ಇದು ಮೂರು ಕೋಟಿಗೂ ಅಧಿಕ ಮಂದಿಗೆ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಉದ್ಯೋಗ ಸೃಷ್ಟಿಸಲಿದೆ.
2,100 ಎಕರೆ ಪ್ರದೇಶದಲ್ಲಿ ಈ ಮೆಗಾ ಪಾರ್ಕ್ ಇರಲಿದೆ. ಈ ಪಾರ್ಕ್ ನ್ನು ಕೃಷಿಯಿಂದ ನೂಲು ಫ್ಯಾಕ್ಟರಿ-ವಿದೇಶ ಹೀಗೆ ಐದು ಎಫ್ ಆಧಾರದ ಮೇಲೆ ರೂಪಿಸಲಾಗಿದೆ.