Select Your Language

Notifications

webdunia
webdunia
webdunia
webdunia

ಪಾಕಿಸ್ತಾನಕ್ಕೆ ಗುಪ್ತ ಮಾಹಿತಿ ರವಾನೆ!

ಪಾಕಿಸ್ತಾನಕ್ಕೆ ಗುಪ್ತ ಮಾಹಿತಿ ರವಾನೆ!
ಮುಂಬೈ , ಭಾನುವಾರ, 7 ಮೇ 2023 (11:06 IST)
ಮುಂಬೈ : ಪಾಕಿಸ್ತಾನಿ  ಏಜೆಂಟ್ಗೆ ಗೌಪ್ಯ ಮಾಹಿತಿ ನೀಡಿದ ಆರೋಪದ ಮೇಲೆ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ವಿಜ್ಞಾನಿಯೊಬ್ಬನನ್ನು ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳ ಬಂಧಿಸಿದೆ.
 
ಉನ್ನತ ಹುದ್ದೆಯಲ್ಲಿದ್ದ ಆರೋಪಿಯು ವಾಟ್ಸಾಪ್ ಮತ್ತು ವೀಡಿಯೊ ಕರೆಗಳ ಮೂಲಕ ಪಾಕಿಸ್ತಾನ ಗುಪ್ತಚರ ಏಜೆಂಟ್ನೊಂದಿಗೆ ಸಂಪರ್ಕದಲ್ಲಿದ್ದ. ಆರೋಪಿಯನ್ನು ಹನಿಟ್ರ್ಯಾಪ್ ಮೂಲಕ ಬೆದರಿಸಿ ಕೃತ್ಯಕ್ಕೆ ಬಳಸಿಕೊಳ್ಳುತ್ತಿದ್ದರು. ಹೆಚ್ಚಿನ ಮಾಹಿತಿ ತನಿಖೆ ನಂತರ ತಿಳಿಯಲಿದೆ ಎಂದು ಎಟಿಎಸ್ ಅಧಿಕಾರಿಗಳು ತಿಳಿಸಿದ್ದಾರೆ. 

ಶತ್ರು ದೇಶಗಳಿಗೆ ತನ್ನ ಬಳಿಯಿರುವ ರಹಸ್ಯ ಮಾಹಿತಿಗಳನ್ನು ಒದಗಿಸಿದರೆ ದೇಶದ ಭದ್ರತೆಗೆ ಅಪಾಯವನ್ನುಂಟುಮಾಡಬಹುದು ಎಂದು ತಿಳಿದಿದ್ದರೂ ಆರೋಪಿ ಮಾಹಿತಿ ನೀಡಿದ್ದಾನೆ. ಈ ಮೂಲಕ ತಮ್ಮ ಸ್ಥಾನವನ್ನು ದುರುಪಯೋಗಪಡಿಸಿಕೊಂಡಿದ್ದಾನೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ನರೇಂದ್ರ ಮೋದಿ ರೋಡ್ ಶೋಗೆ ಹೈಕೋರ್ಟ್ ಗ್ರೀನ್ ಸಿಗ್ನಲ್