Select Your Language

Notifications

webdunia
webdunia
webdunia
webdunia

ಹನುಮಾನ್ ಚಾಲಿಸ್ ಪಠನೆ; ಮಹಾರಾಷ್ಟ್ರ ಸಿಎಂ ನಿವಾಸಕ್ಕೆ ಭದ್ರತೆ

shiva Sena Hanuman Chalisa Uddhav Thackeray ಉದ್ದವ್‌ ಠಾಕ್ರೆ ಹನುಮಾನ್‌ ಚಾಲಿಸ್‌ ಶಿವಸೇನಾ
bengaluru , ಶನಿವಾರ, 23 ಏಪ್ರಿಲ್ 2022 (15:11 IST)
ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನಿವಾಸದೆದುರು ಹನುಮಾನ್ ಚಾಲೀಸ್ ಪಠಿಸುವುದಾಗಿ ಸಂಸದೆ ನವನೀತ್ ರಾಣಾ ಹಾಗೂ ಶಾಸಕ ರವಿ ರಾಣಾ ಸವಾಲು ಹಾಕಿರುವ ಬೆನ್ನಲ್ಲೇ ಮುಖ್ಯಮಂತ್ರಿ ನಿವಾಸಕ್ಕೆ ಬಿಗಿ ಪೊಲೀಸ್ ಭದ್ರತೆಯನ್ನು ಒದಗಿಸಲಾಗಿದೆ.
ಮಹಾರಾಷ್ಟ್ರಕ್ಕೆ ಹಿಡಿದಿರುವ ಸಾಡೇಸಾತಿನಿಂದ ವಿಮೋಚನೆ ಕೊಡಿಸುವ ಸಲುವಾಗಿ ಮುಖ್ಯಮಂತ್ರಿಯವರ ಖಾಸಗಿ ನಿವಾಸ ಮಾತೋಶ್ರೀ ಎದುರು ಬದ್ನೇರ ಕ್ಷೇತ್ರದ ಶಾಸಕ ರವಿ ರಾಣಾ ಮತ್ತು ಅಮರಾವತಿಯ ಸಂಸದೆ ನವನೀತ್ ರಾಣಾ ಸವಾಲು ಹಾಕಿದ್ದರು.
ಈ ಬೆಳವಣಿಗೆ ಬೆನ್ನಲ್ಲೇ ರಾಣಾ ದಂಪತಿಗಳ ನಿವಾಸದೆದುರು ಜಮಾಯಿಸಿರುವ ನೂರಾರು ಶಿವಸೇನಾ ಕಾರ್ಯಕರ್ತರು ಈಗಲ್ಲೇ ನೀವು ಇಲ್ಲಂದ ಹೊರಟು ಹೋಗಿ ಇಲ್ಲವಾದಲ್ಲಿ ನೀವು ನಮ್ಮಿಂದ ಮಹಾಪ್ರಸಾದವನ್ನು ಸ್ವೀಕರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಈಗಾಗಲೇ ಮುಖ್ಯಮಂತ್ರಿ ಹಾಗೂ ರಾಣಾ ದಂಪತಿಗಳು ವಾಸಿಸುವ ಪ್ರದೇಶದ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿದ್ದು ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಅಗತ್ಯ ಮುಂಜಾಗ್ರತ ಕ್ರಮವನ್ನು ವಹಿಸಲಾಗಿದೆ ಎಂದು ಉನ್ನತ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

545 ಪಿಎಸ್‌ ಐ ನೇಮಕಾತಿ ಅಕ್ರಮ: ಕಿಂಗ್‌ ಪಿನ್‌ ರುದ್ರಗೌಡ ಅರೆಸ್ಟ್!‌