Webdunia - Bharat's app for daily news and videos

Install App

ಭೂತ ಉಚ್ಛಾಟಿಸುವುದಾಗಿ 48 ಲಕ್ಷ ದೋಚಿದ ಮಹಿಳೆ ಬಂಧನ

Webdunia
ಶನಿವಾರ, 31 ಅಕ್ಟೋಬರ್ 2020 (10:55 IST)
ಚೆನ್ನೈ: ಭೂತ ಉಚ್ಛಾಟಿಸುವ ನೆಪದಲ್ಲಿ ವ್ಯಕ್ತಿಯೊಬ್ಬರಿಂದ 8 ಲಕ್ಷ ರೂ. ನಗದು, ಚಿನ್ನಾಭರಣ ದೋಚಿದ ಸ್ವಯಂ ಘೋಷಿತ ದೇವಮಾನವ ಮಹಿಳೆಯನ್ನು ತಮಿಳುನಾಡಿನಲ್ಲಿ ಪೊಲೀಸರು ಬಂಧಿಸಿದ್ದಾರೆ.


ಶಿವಕುಮಾರ್ ಎಂಬ ವ್ಯಕ್ತಿ ಹಣ ಕಳೆದುಕೊಂಡವರು. ಇವರ ಪತ್ನಿ ಕೆಲವು ಸಮಯದ ಹಿಂದೆ ಸೀರೆಗೆ ಬೆಂಕಿ ತಗುಲಿ ಆಕಸ್ಮಿಕವಾಗಿ ತೀರಿಕೊಂಡಿದ್ದರು. ಈ ದುರ್ಘಟನೆಗೆ ಕಾರಣ ದುಷ್ಟ ಶಕ್ತಿಗಳು ಎಂದು ಶಿವಕುಮಾರ್ ನಂಬಿದ್ದರು.  ಹೀಗಾಗಿ ಮನೆಯಲ್ಲಿ ದುಷ್ಟ ಶಕ್ತಿಯ ದೂರ ಮಾಡಲು ಆರೋಪಿ ನಾರಾಯಣಿಯನ್ನು ಮಾಟ ಮಂತ್ರ ಮಾಡಲು ಕರೆ ತಂದಿದ್ದರು. ಮನೆಗೆ ಬಂದಿದ್ದ ನಾರಾಯಣಿ ಶಿವಕುಮಾರ್ ಅವರ ಬಳಿಯಿದ್ದ ಚಿನ್ನಾಭರಣವಲ್ಲದೆ, ಅವರ ಮನೆಗೆ ಬಂದ ನೆಂಟರಿಷ್ಟರ ಚಿನ್ನಾಭರಣಗಳನ್ನೂ ಪಡೆದು ದುಷ್ಟ ಶಕ್ತಿ ಹೋದ ಬಳಿಕ ಚಿನ್ನಾಭರಣ ಮರಳಿಸುವುದಾಗಿ ನಂಬಿಸಿದ್ದಳು. ಆದರೆ ವರ್ಷ ಕಳೆದರೂ ಚಿನ್ನಾಭರಣ ಹಿಂತಿರುಗಿಸದೇ ಇದ್ದಾಗ ಸಂಶಯಗೊಂಡ ಶಿವಕುಮಾರ್ ಪೊಲೀಸರ ಮೊರೆ ಹೋಗಿದ್ದಾರೆ. ಇದೀಗ ಪ್ರಕರಣ ಸಂಬಂಧ ಪೊಲೀಸರು ಆರೋಪಿ ನಾರಾಯಣಿ ಮತ್ತು ಆಕೆಗೆ ಸಹಾಯ ಮಾಡಿದ್ದ ಇಬ್ಬರನ್ನು ಬಂಧಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಧರ್ಮಸ್ಥಳ ಗೊಂದಲಕ್ಕೆ ಇಂದೇ ತೆರೆ: ವಿಜಯೇಂದ್ರ ವಿಶ್ವಾಸ

ಡಾ ದೇವಿಪ್ರಸಾದ್ ಶೆಟ್ಟಿ ಪ್ರಕಾರ ಹೃದಯಾಘಾತ ತಡೆಯಲು ಮೂರು ಪರೀಕ್ಷೆಗಳು ಕಡ್ಡಾಯ

Arecanut Price: ಇಂದು ಅಡಿಕೆ ರೇಟ್ ಎಷ್ಟು ನೋಡಿ

Gold Price: ಚಿನ್ನದ ದರ ಇಂದು ಎಷ್ಟಾಗಿದೆ ನೋಡಿ

ಧರ್ಮಸ್ಥಳ ಕೇಸ್ ಬಗ್ಗೆ ಇಂದು ಸಚಿವ ಪರಮೇಶ್ವರ್ ಏನು ಹೇಳ್ತಾರೆ ಎಂಬುದೇ ಎಲ್ಲರ ಕುತೂಹಲ

ಮುಂದಿನ ಸುದ್ದಿ
Show comments