Select Your Language

Notifications

webdunia
webdunia
webdunia
webdunia

ಕಾರ್ಗಿಲ್ ಹುತಾತ್ಮನ ಪುತ್ರಿಗೆ ಟ್ವಿಟ್ಟರ್`ನಲ್ಲಿ ಟಾಂಗ್ ನೀಡಿದ ಸೆಹ್ವಾಗ್

ಕಾರ್ಗಿಲ್ ಹುತಾತ್ಮನ ಪುತ್ರಿಗೆ ಟ್ವಿಟ್ಟರ್`ನಲ್ಲಿ ಟಾಂಗ್ ನೀಡಿದ ಸೆಹ್ವಾಗ್
NEWDELHI , ಸೋಮವಾರ, 27 ಫೆಬ್ರವರಿ 2017 (19:56 IST)
ಮೈದಾನದಲ್ಲಿ ಹೊಡಿಬಡಿ ಆಟದ ಮೂಲಕ ಖ್ಯಾತರಾಗಿದ್ದ ಸೆಹ್ವಾಗ್ ನಿವೃತ್ತಿ ಬಳಿಕ ಹಲವು ಸಂಗತಿಗಳ ಕುರಿತಂತೆ ಟ್ವಿಟ್ಟರ್`ನಲ್ಲಿ ಪ್ರತಿಕ್ರಿಯಿಸುವ ಮೂಲಕ ಸುದ್ದಿ ಮಾಡುತ್ತಿದ್ದಾರೆ. ಈ ಬಾರಿ ಅವರು, ಸೋಶಿಯಲ್ ಮೀಡಿಯಾದಲ್ಲಿ ಎಬಿವಿಪಿ ವಿರುದ್ಧ ಸ್ಟೂಡೆಂಟ್ಸ್ ಎಗೆನ್ಸ್ಟ್ ಎಬಿವಿಪಿ ಅಭಿಯಾನ ಆರಂಭಿಸಿರುವ ಕಾರ್ಗಿಲ್ ಹುತಾತ್ಮ ಯೋಧನ ಪುತ್ರಿ ರಾಮಜಾನ್ ಕಾಲೇಜಿನ ವಿದ್ಯಾರ್ಥಿನಿ ಗುರ್ ಮೆಹರ್ ಕೌರ್`ಗೆ ಟಾಂಗ್ ನೀಡುವ ಭರದಲ್ಲಿ ಮಾಡಿರುವ ಟ್ವೀಟ್ ಬಗ್ಗೆ ಭಾರಿ ಟೀಕೆ ವ್ಯಕ್ತವಾಗುತ್ತಿದೆ.


ಭಾರತ ಮತ್ತು ಪಾಕಿಸ್ತಾನದ ನಡುವೆ ಶಾಂತಿ ನೆಲೆಸಬೇಕೆಂದು ಗುರ್ ಮೆಹರ್, `ನನ್ನ ತಂದೆಯನ್ನ ಕೊಂದಿದ್ದು ಪಾಕಿಸ್ತಾನವಲ್ಲ ಯುದ್ಧ’ ಎಂದು ಪ್ಲೇ ಕಾರ್ಡ್ ಹಿಡಿದು ವಿಡಿಯೋ ತಯಾರಿಸಿದ್ದರು. ಈ ಪ್ಲೇ ಕಾರ್ಡ್ ಕುರಿತಂತೆ ಟ್ವೀಟ್ ಮಾಡಿರುವ ಸೆಹ್ವಾಗ್, ಎರಡು ಬಾರಿ ತ್ರಿಶಕ ಸಿಡಿಸಿದ್ದು ನಾನಲ್ಲ, ನನ್ನ ಬ್ಯಾಟ್ ಎಂದು ವ್ಯಂಗ್ಯವಾಗಿ ಟ್ವೀಟ್ ಮಾಡಿದ್ದಾರೆ. ಇದು ಟ್ವಿಟರಾತಿಗಳ ಆಕ್ರೋಶಕ್ಕೂ ಕಾರಣವಾಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಕಮ್ಮನಹಳ್ಳಿ ಲೈಂಗಿಕ ದೌರ್ಜನ್ಯ ಕೇಸ್: ತನಿಖೆಗೆ ಹಾಜರಾಗದೆ ಮನೆ ಖಾಲಿ ಮಾಡಿದ ಯುವತಿ