Select Your Language

Notifications

webdunia
webdunia
webdunia
webdunia

ಕಮ್ಮನಹಳ್ಳಿ ಲೈಂಗಿಕ ದೌರ್ಜನ್ಯ ಕೇಸ್: ತನಿಖೆಗೆ ಹಾಜರಾಗದೆ ಮನೆ ಖಾಲಿ ಮಾಡಿದ ಯುವತಿ

ಕಮ್ಮನಹಳ್ಳಿ ಲೈಂಗಿಕ ದೌರ್ಜನ್ಯ ಕೇಸ್: ತನಿಖೆಗೆ ಹಾಜರಾಗದೆ ಮನೆ ಖಾಲಿ ಮಾಡಿದ ಯುವತಿ
bengaluru , ಸೋಮವಾರ, 27 ಫೆಬ್ರವರಿ 2017 (19:18 IST)
ಲೈಂಗಿಕ ಕಿರುಕುಳಕ್ಕೆ ಸಂಬಂಧಿಸಿದಂತೆ ಯುವತಿ ತನಿಖೆಗೆ ಸಹಕರಿಸುತ್ತಿಲ್ಲ ಎಂಬ ಸುದ್ದಿ ಕೇಳಿಬರುತ್ತಿದೆ. ಆರೋಪಿಗಳ ಗುರುತು ಪತ್ತೆ ಪರೇಡ್`ಗೆ ಎರಡು ಬಾರಿ ಯುವತಿ ಹಾಜರಾಗಿಲ್ಲ. ನಾಳೆ ಮೂರನೇ ಬಾರಿಗೆ ಗುರುತು ಪತ್ತೆ ಪರೇಡ್ ನಡೆಸಲಾಗುತ್ತಿದ್ದು, ಯುವತಿ ಹಾಜರಾಗದಿದ್ದಲ್ಲಿ ತನಿಖೆಗೆ ಭಾರೀ ಹಿನ್ನಡೆಯಾಗುವ ಸಾಧ್ಯತೆ ಇದೆ.


ಈ ನಡುವೆ ಯುವತಿ ಮನಹಳ್ಳಿಯ  ಖಾಲಿ ಮಾಡಿದ್ದು, ಪೊಲಿಸರಿಗೂ ಮಾಹಿತಿ ನೀಡಿಲ್ಲ. ಯುವತಿ ಎಲ್ಲಿದ್ದಾಳೆ ಎಂಬ ಬಗ್ಗೆ ಸ್ಪಷ್ಟ ಮಾಹಿತಿ ಸಿಗುತ್ತಿಲ್ಲ. ಆರೋಪಿಗಳಿಗೆ ಹೆದರಿ ಎಲ್ಲಿಯಾದರೂ ಹೊರಟುಹೋಗಿದ್ದಾರಾ ಎಂಬ ಅನುಮಾನ ಮೂಡಿದೆ.

ಹೊಸವರ್ಷಾಚರಣೆಯ ರಾತ್ರಿ ಕಮ್ಮನಹಳ್ಳಿಯಲ್ಲಿ ಯುವತಿ ಮೇಲೆ ಲೈಂಗಿಕ ದೌರ್ಜನ್ಯ ನಡೆದಿತ್ತು. ಆಟೋ ಇಳಿದು ಮನೆಗೆ ತೆರಳುತ್ತಿದ್ದ ಯುವತಿ ಮೇಲೆರಗಿದ್ದ ಕಾಮುಕರ ಗುಂಪು ಹಿಂಸೆ ನೀಡಿತ್ತು. ಒಬ್ಬ ಕಾಮುಕ ಯುವತಿಯನ್ನ ತಬ್ಬಿ ಅಸಭ್ಯವಾಗಿ ವರ್ತಿಸಿದ್ದ. ಸಿಸಿಟಿವಿಯಲ್ಲಿ ದೌರ್ಜನ್ಯದ ವಿಡಿಯೋ ರೆಕಾರ್ಡ್ ಆಗಿತ್ತು. ದೇಶಾದ್ಯಂತ  ಪ್ರಕರಣ ಭಾರೀ ಸುದ್ದಿ ಮಾಡಿತ್ತು. 

Share this Story:

Follow Webdunia kannada

ಮುಂದಿನ ಸುದ್ದಿ

11 ಸಿಮಿ ಉಗ್ರರಿಗೆ ಜೀವಾವಧಿ ಶಿಕ್ಷೆ