Meerut Saurabh Rajput Case: ಊರೇ ಬಿಡಲು ಮುಂದಾದ ಆರೋಪಿ ಮುಸ್ಕಾನ್ ಕುಟುಂಬ

Sampriya
ಗುರುವಾರ, 6 ನವೆಂಬರ್ 2025 (18:54 IST)
Photo Credit X
ಮೀರತ್: ದೇಶವನ್ನೇ ಬೆಚ್ಚಿಬೀಳಿಸಿದ ಪತ್ನಿಯಿಂದಲೇ ಹತ್ಯೆಗೀಡಾದ ಸೌರಭ್ ರಜಪೂತ್ ಪ್ರಕರಣ ನಡೆದು 8 ತಿಂಗಳಾದರೂ  ದುರ್ಘಟನೆಯ ಪ್ರಭಾವ ಮೀರತ್‌ನ  ಇಂದಿರಾನಗರದ ಮೇಲೆ ಇನ್ನೂ ಹಾಗೆಯೇ ಇದೆ.  ಆರೋಪಿ, ಪತ್ನಿ ಮುಸ್ಕಾನ್ ರಸ್ತೋಗಿ ಕುಟುಂಬ ಅದೇ ನಗರದಲ್ಲಿ ವಾಸಿಸುತ್ತಿದ್ದು, ಇದೀಗ ಆ ಕುಟುಂಬ ಊರು ಬಿಡಲು ಚಿಂತಿಸಿದೆ. 

ಬುಧವಾರ ಅವರ ನಿವಾಸದ ಹೊರಗೆ ‘ಮನೆ ಮಾರಾಟಕ್ಕಿದೆ’ ಎಂಬ ಫಲಕ ಇದೀಗ ಕುತೂಹಲವನ್ನು ಮೂಡಿದೆ.

ಮುಸ್ಕಾನ್ ಅವರ ತಂದೆ ಪ್ರಮೋದ್ ರಸ್ತೋಗಿ ಗುರುವಾರ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಕುಟುಂಬವು ಇನ್ನು
ಮುಂದೆ ಮೀರತ್‌ನಲ್ಲಿ ವಾಸಿಸಲು ಬಯಸುವುದಿಲ್ಲ.

"ಇಲ್ಲಿ ನೋವಿನ ನೆನಪುಗಳು ಮಾತ್ರ ಉಳಿದಿವೆ. ನಾವು ಹೊರಹೋಗಲು ಮತ್ತು ಹೊಸದಾಗಿ ಪ್ರಾರಂಭಿಸಲು ಬಯಸುತ್ತೇವೆ" ಎಂದು ಅವರು ಹೇಳಿದರು.

ಪ್ರಮೋದ್ ಅವರ ಪತ್ನಿ ಕವಿತಾ ಮತ್ತು ಪುತ್ರ ರಾಹುಲ್ ಕೂಡ ಈ ನಿರ್ಧಾರವನ್ನು ಬೆಂಬಲಿಸಿದ್ದಾರೆ.

ಮಾರ್ಚ್ 3 ರಂದು ತಮ್ಮ ಮಗಳು ಮುಸ್ಕಾನ್ ರಸ್ತೋಗಿ ತನ್ನ ಗೆಳೆಯನ ಜತೆಗೂಡಿ ಪತಿ ಸೌರಭ್‌ನನ್ನು ಭೀಕರವಾಗಿ ಹತ್ಯೆ ಮಾಡಿ, ಡ್ರಮ್‌ ಒಳಗಡೆ ಇಟ್ಟಿದ್ದಳು. ಈ ಪ್ರಕರಣ ಇಡೀ ದೇಶವನ್ನೇ ಬೆಚ್ಚಿಬೀಳಿಸಿತು. 

ಇದೀಗ ಈ ಘಟನೆ ಬಳಿಕ ಮುಸ್ಕಾನ್‌ನ ಕುಟುಂಬ ಸಮಾಜದಲ್ಲಿ ಬದುಕಳು ಕಷ್ಟ ಪಡುತ್ತಿದ್ದಾರೆ ಎಂದಿದ್ದಾರೆ.  ನಡೆದ ಘಟನೆಯಿಂದ ಅವರ ಸಾಮಾಜಿಕ ಮತ್ತು ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ ಎಂದು ಕುಟುಂಬ ಹೇಳಿದೆ. ಪ್ರಮೋದ್ ಅವರ ಆಭರಣ ವ್ಯಾಪಾರವು ಮುಚ್ಚುವ ಹಂತದಲ್ಲಿದೆ, ಗ್ರಾಹಕರು ದೂರ ಉಳಿದಿದ್ದಾರೆ ಮತ್ತು ಸಾಲಗಾರರು ವಹಿವಾಟುಗಳನ್ನು ಸ್ಥಗಿತಗೊಳಿಸಿದ್ದಾರೆ ಎಂದು ಅವರು ಹೇಳಿದರು.

ಜನರು ತಮ್ಮ ಮಕ್ಕಳನ್ನು ಕಳುಹಿಸುವುದನ್ನು ನಿಲ್ಲಿಸಿದ ನಂತರ ಮನೆಯಲ್ಲಿ ಟ್ಯೂಷನ್ ಹೇಳುತ್ತಿದ್ದ ಮುಸ್ಕಾನ್ ಅವರ ತಂಗಿಯೂ ತನ್ನ ಆದಾಯವನ್ನು ಕಳೆದುಕೊಂಡರು.

ಪೊಲೀಸ್ ದಾಖಲೆಗಳ ಪ್ರಕಾರ, ಮುಸ್ಕಾನ್ ಮತ್ತು ಆಕೆಯ ಪ್ರೇಮಿ ಸಾಹಿಲ್ ಶುಕ್ಲಾ ಮಾರ್ಚ್ 3 ರಂದು ಆಕೆಯ ಪತಿ ಸೌರಭ್ ರಜಪೂತ್ ನನ್ನು ಕೊಲೆ ಮಾಡಿದ್ದಾರೆ.  ಮೃತದೇಹವನ್ನು ನಾಲ್ಕು ತುಂಡುಗಳಾಗಿ ಕತ್ತರಿಸಿ, ಅವುಗಳನ್ನು ಡ್ರಮ್‌ನಲ್ಲಿ ತುಂಬಿಸಿ ಮತ್ತು ಸಿಮೆಂಟ್ ತುಂಬಿಸಿ ಹಿಮಾಚಲ ಪ್ರದೇಶಕ್ಕೆ ಪಲಾಯನ ಮಾಡಿದರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಬೆಂಗಳೂರು ಎರ್ನಾಕುಲಂ ಸೇರಿದಂತೆ ನಾಲ್ಕು ವಂದೇ ಭಾರತ್ ರೈಲುಗಳಿಗೆ ನರೇಂದ್ರ ಮೋದಿ ಚಾಲನೆ, ಇಲ್ಲಿದೆ ಮಾಹಿತಿ

ನವೆಂಬರ್ ಕ್ರಾಂತಿ ಬಗ್ಗೆ ದೆಹಲಿಯಲ್ಲಿ ಸ್ಫೋಟಕ ಹೇಳಿಕೆ ಕೊಟ್ಟ ಡಿಕೆ ಶಿವಕುಮಾರ್‌

ಜಾಗ ಸರ್ವೇಗೆ ಬಂದ ಅಧಿಕಾರಿಗಳ ಎದುರು ದೈವ ಮೈಮೇಲೆ ಬಂದ ಹಾಗೇ ವರ್ತಿಸಿದ ವ್ಯಕ್ತಿ

ಸಂಕಷ್ಟದಲ್ಲಿರುವ ರೈತರಿಗೆ ಬಿಡಿಗಾಸನ್ನೂ ನೀಡದ ಸಿದ್ದರಾಮಯ್ಯರ ಸರಕಾರ: ಬಿ.ವೈ.ವಿಜಯೇಂದ್ರ

ಸಿದ್ದರಾಮಯ್ಯ ಬೆಲೆಯೇರಿಕೆಯ ಬಾದ್ ಷಾ: ಬಿಜೆಪಿ ಕಟು ಟೀಕೆ

ಮುಂದಿನ ಸುದ್ದಿ
Show comments