ಅಯೋಧ್ಯೆ: ಇತ್ತೀಚೆಗೆ ನಿಧನರಾದ ಅಯೋಧ್ಯೆಯ ಪ್ರಧಾನ ಅರ್ಚಕ ಸತ್ಯೇಂದ್ರ ದಾಸ್ ಅವರ ಮೃತದೇಹವನ್ನು ಸಂಪ್ರದಾಯದಂತೆ ಸರಯೂ ನದಿಗೆ ಅರ್ಪಿಸಲಾಯಿತು. ಆ ವಿಡಿಯೋ ಇಲ್ಲಿದೆ.
ಸತ್ಯೇಂದ್ರ ದಾಸ್ ಅಯೋಧ್ಯೆಯ ಪ್ರಧಾನ ಅರ್ಚಕರಾಗಿದ್ದವರು. 1992 ರಿಂದ ಇಲ್ಲಿಯವರೆಗೂ ಅಯೋಧ್ಯೆ ರಾಮನ ಪೂಜೆ ಮಾಡಿಕೊಂಡು ಬಂದವರು. ಇದೀಗ ವಯೋಸಹಜ ಖಾಯಿಲೆಯಿಂದಾಗಿ ಮೃತಪಟ್ಟಿದ್ದರು.
ಹಿಂದೂ ಸಂಪ್ರದಾಯದಂತೆ ಅವರ ಮೃತದೇಹವನ್ನು ಅಯೋಧ್ಯೆಯ ತುಳಸೀಘಾಟ್ ನಲ್ಲಿ ಸರಯೂ ನದಿ ನೀರಿನಲ್ಲಿ ತೇಲಿಬಿಡುವ ಮೂಲಕ ಜಲಸಮಾಧಿ ಮಾಡಲಾಯಿತು. ಈ ವೇಳೆ ನೂರಾರು ಭಕ್ತರು ಪಾಲ್ಗೊಂಡಿದ್ದರು.
ತಮ್ಮ ಜೀವಿತಾವಧಿಯ ಉದ್ದಕ್ಕೂ ಶ್ರೀರಾಮನ ಸೇವೆಯಲ್ಲೇ ಕಳೆದ ಸತ್ಯೇಂದ್ರ ದಾಸ್ ಗೆ ಶ್ರೀರಾಮ ದೇಹ ತ್ಯಾಗ ಮಾಡಿದ ಅದೇ ಸರಯೂ ನದಿಯಲ್ಲೇ ಸಮಾಧಿ ಮಾಡಲಾಗಿದ್ದು ವಿಶೇಷ. ಈ ವಿಡಿಯೋ ಇಲ್ಲಿದೆ ನೋಡಿ.