Select Your Language

Notifications

webdunia
webdunia
webdunia
webdunia

ಅಯೋಧ್ಯೆ ರಾಮಮಂದಿರಕ್ಕೆ ಬಿಜೆಪಿ ಉಚಿತ ಟೂರ್ ಆಯೋಜಿಸಿದೆಯೇ: ಇಲ್ಲಿದೆ ನಿಜಾಂಶ

Ayodhya Ram Mandir

Krishnaveni K

ಬೆಂಗಳೂರು , ಬುಧವಾರ, 1 ಜನವರಿ 2025 (14:31 IST)
ಬೆಂಗಳೂರು: ರಾಜ್ಯದಿಂದ ಅಯೋಧ್ಯೆಗೆ 25 ರೈಲುಗಳು ಹೋಗಲಿವೆ; ಆಸಕ್ತರು ಹೆಸರು ಕೊಡಬೇಕು ಎಂಬ ಮಾಹಿತಿ ಇರುವ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರ ಕಳೆದ ವರ್ಷದ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಮರು ಪೋಸ್ಟ್ ಮಾಡುತ್ತಿದ್ದಾರೆ ಎಂದು ಅಯೋಧ್ಯೆ ಶ್ರೀ ರಾಮ ಮಂದಿರ ದರ್ಶನ ಅಭಿಯಾನ ರಾಜ್ಯ ಸಹ ಸÀಂಚಾಲಕ ಜಗದೀಶ್ ಹಿರೇಮನಿ ಅವರು ತಿಳಿಸಿದ್ದಾರೆ.
 
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಮಾಧ್ಯಮದವರ ಜೊತೆ ಮಾತನಾಡಿದ ಅವರು, ಈ ವರ್ಷ ಬಿಜೆಪಿ ವತಿಯಿಂದ ಅಯೋಧ್ಯೆ ಶ್ರೀರಾಮ ಮಂದಿರಕ್ಕೆ ಕರೆದುಕೊಂಡು ಹೋಗುವ ಕಾರ್ಯಕ್ರಮ ಸದ್ಯಕ್ಕೆ ಇಲ್ಲ ಎಂದು ಸ್ಪಷ್ಟಪಡಿಸಿದರು.
 
ಪಕ್ಷದ ಹಿತೈಷಿಗಳು, ಕಾರ್ಯಕರ್ತರು ಮತ್ತು ಸಾರ್ವಜನಿಕರು ಇದರ ಮಾಹಿತಿಯನ್ನು ತಿಳಿದುಕೊಳ್ಳಬೇಕು ಎಂದು ಮನವಿ ಮಾಡಿದರು. ಈ ವರ್ಷ ಜನವರಿ- ಫೆಬ್ರವರಿಯಲ್ಲಿ ಬಿಜೆಪಿಯಿಂದ ಅಯೋಧ್ಯೆಗೆ ಕರೆದುಕೊಂಡು ಹೋಗುವ ಯೋಜನೆ ಇಲ್ಲ ಎಂದು ವಿವರ ನೀಡಿದರು.
 
2024 ಜನವರಿ 22ರಂದು ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ಆಗಿತ್ತು. ಪ್ರಧಾನಿ ನರೇಂದ್ರ ಮೋದಿಯವರು ಪ್ರತಿಷ್ಠಾಪನೆ ಮಾಡಿದ್ದ ಅಯೋಧ್ಯೆಗೆ ಇಡೀ ದೇಶಾದ್ಯಂತ ಶ್ರೀ ರಾಮ ಮಂದಿರ ದರ್ಶನ ಅಭಿಯಾನವನ್ನು ನಾವು ಕಳೆದ ವರ್ಷ ಜನವರಿ- ಫೆಬ್ರವರಿಯಲ್ಲಿ ನಡೆಸಿದ್ದೆವು ಎಂದು ವಿವರಿಸಿದರು. 25 ರೈಲುಗಳಲ್ಲಿ 26 ಸಾವಿರ ರಾಮಭಕ್ತರನ್ನು ಅಯೋಧ್ಯೆಗೆ ದರ್ಶನಕ್ಕೆ ಕಳುಹಿಸಿದ್ದೆವು ಎಂದು ತಿಳಿಸಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಸ್, ಐಎಸ್ ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಕ್ಲಾಸ್