Select Your Language

Notifications

webdunia
webdunia
webdunia
webdunia

ರಾಮಮಂದಿರ ಪ್ರಾಣಪ್ರತಿಷ್ಠೆಗೆ ಒಂದು ವರ್ಷ: ರಾಮ ಮಂದಿರ ಈಗ ಹೇಗಿದೆ

Ram Mandir

Krishnaveni K

ಅಯೋಧ್ಯೆ , ಶನಿವಾರ, 11 ಜನವರಿ 2025 (09:54 IST)
ಅಯೋಧ್ಯೆ: ರಾಮನ ಜನ್ಮಭೂಮಿಯಲ್ಲಿ ರಾಮಲಲ್ಲಾನ ಪ್ರಾಣಪ್ರತಿಷ್ಠೆಯಾಗಿ ಇಂದಿಗೆ ಒಂದು ವರ್ಷವಾಗಿದೆ. ರಾಮಮಂದಿರ ಈ ಹೇಗಿದೆ?

ಪ್ರಭು ಶ್ರೀರಾಮಚಂದ್ರನ ಜನ್ಮಸ್ಥಳವಾದ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಕೋಟ್ಯಾಂತರ ಹಿಂದೂಗಳ ಕನಸಾಗಿತ್ತು. ಆ ಕನಸು ನನಸಾದ ದಿನ ಇಂದು. ಕ್ಯಾಲೆಂಡರ್ ಪ್ರಕಾರ ಜನವರಿ 22 ರಂದು ಪ್ರಾಣ ಪ್ರತಿಷ್ಠೆಯಾಗಿದ್ದರೂ ತಿಥಿ, ಶುಭ ಯೋಗದ ಪ್ರಕಾರ ಇಂದು ವಾರ್ಷಿಕೋತ್ಸವ ಆಚರಿಸಲಾಗುತ್ತಿದೆ. ರಾಮಮಂದಿರದಲ್ಲಿ ರಾಮಲಲ್ಲಾನ ಮೂರ್ತಿಯನ್ನು ಕೆತ್ತಿದ್ದು ನಮ್ಮ ಮೈಸೂರಿನ ಶಿಲ್ಪಿ ಅರುಣ್ ಯೋಗಿ. ತಿರುಪತಿ ತಿಮ್ಮಪ್ಪನ ಮೂರ್ತಿಯನ್ನೇ ಹೋಲುವಂತಹ ರಾಮಲಲ್ಲಾನ ಮೂರ್ತಿ ಇದೀಗ ಭಕ್ತರ ಕಣ್ಮನ ಸೆಳೆಯುತ್ತಿದೆ.

ಕಳೆದ ವರ್ಷ ಪ್ರಧಾನಿ ಮೋದಿ ಯಜಮಾನನ ಸ್ಥಾನದಲ್ಲಿ ಕುಳಿತು ಪ್ರಾಣ ಪ್ರತಿಷ್ಠೆಯ ಪೂಜಾ ವಿಧಿ ವಿಧಿಗಳನ್ನು ನೆರವೇರಿಸಿದ್ದರು. ಈ ಸಂದರ್ಭದಲ್ಲಿ ಸಾಕಷ್ಟು ಗಣ್ಯರು ಪ್ರತ್ಯಕ್ಷ ಸಾಕ್ಷಿಗಳಾಗಿದ್ದರು. ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ ಕಾರ್ಯಕ್ರಮ ಒಂದು ರೀತಿಯ ಉತ್ಸವವಾಗಿತ್ತು.

ಇದಾದ ಬಳಿಕ ದೇಶದ ಅತ್ಯಂತ ಪ್ರಸಿದ್ಧ ಪುಣ್ಯ ಕ್ಷೇತ್ರಗಳಲ್ಲಿ ಇದೂ ಒಂದಾಗಿದೆ. ಕಾಶಿಗೆ ತೀರ್ಥಯಾತ್ರೆ ಕೈಗೊಳ್ಳುವವರು ಅಯೋಧ್ಯೆಯೂ ಒಂದು ಭೇಟಿ ಕೊಟ್ಟೇ ಕೊಡುತ್ತಾರೆ. ಇದರಿಂದಾಗಿ ಲಕ್ಷಾಂತರ ಮಂದಿ ರಾಮಮಂದಿರಕ್ಕೆ ಭೇಟಿ ಕೊಡುತ್ತಲೇ ಬಂದಿದ್ದಾರೆ.

ಇನ್ನೂ ರಾಮಮಂದಿರ ನಿರ್ಮಾಣ ಕಾರ್ಯ ಸಂಪೂರ್ಣವಾಗಿಲ್ಲ. ಈಗಲೂ ಗರ್ಭಗುಡಿಯಿರುವ ಜಾಗ ಬಿಟ್ಟರೆ ಉಳಿದ ಜಾಗದಲ್ಲಿ ನಿರ್ಮಾಣ ಕಾರ್ಯ ನಡೆಯುತ್ತಲೇ ಇದೆ. ಕೆತ್ತನೆ ಕಾರ್ಯಗಳು ಮುಂದುವರಿದಿವೆ. ಹಾಗಿದ್ದರೂ ಬರುವ ಭಕ್ತರ ಸಂಖ್ಯೆಗೇನೋ ಕೊರತೆಯಿಲ್ಲ ಎಂದು ರಾಮಮಂದಿರಕ್ಕೆ ಭೇಟಿ ಕೊಟ್ಟ ಭಕ್ತರು ಹೇಳುತ್ತಿದ್ದಾರೆ.

ರಾಮಮಂದಿರ ಉದ್ಘಾಟನೆಯಾಗಿ ಒಂದು ವರ್ಷವಾಗಿರುವ ಹಿನ್ನಲೆಯಲ್ಲಿ ಇಂದಿನಿಂದ ಮೂರು ದಿನಗಳ ಕಾಲ ಅಯೋಧ್ಯೆಯಲ್ಲಿ ವಿಶೇಷ ಉತ್ಸವ ನಡೆಯಲಿದೆ. ಈ ತಿಂಗಳು ರಾಮಮಂದಿರಕ್ಕೆ ಭೇಟಿ ನೀಡುವ ಭಕ್ತರ ಸಂಖ್ಯೆಯೂ ಸಾಕಷ್ಟು ಹೆಚ್ಚಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಪುತ್ರಿ, ಅಳಿಯನಿಗೆ ಮುಡಾ ಸೈಟು ಕೊಡಿಸಿದ ಜಿಟಿ ದೇವೇಗೌಡ: ಶಾಸಕರಿಗೆ ಸಂಕಷ್ಟ