Select Your Language

Notifications

webdunia
webdunia
webdunia
webdunia

ತಮಿಳುನಾಡು ಮುಖ್ಯಮಂತ್ರಿ ಗದ್ದುಗೆ ಏರುತ್ತಿದ್ದಾರೆ ಚಿನ್ನಮ್ಮ?

Sasikala Natarajan
ಚೆನ್ನೈ , ಶನಿವಾರ, 4 ಫೆಬ್ರವರಿ 2017 (11:44 IST)
ತಮಿಳುನಾಡಿನ ರಾಜಕೀಯದಲ್ಲಿ ಕ್ಷಿಪ್ರ ರಾಜಕೀಯ ಬೆಳವಣಿಗೆಗಳು ಮುಂದುವರೆದಿದ್ದು ಜಯಲಲಿತಾ ಆಪ್ತೆ ಶಶಿಕಲಾ ನಟರಾಜನ್ ಮುಖ್ಯಮಂತ್ರಿ ಪಟ್ಟವನ್ನೇರುತ್ತಾರೆ ಎಂಬ ಸುದ್ದಿ ಹರಿದು ಬಂದಿದೆ. ದೊರತಿರುವ ಮಾಹಿತಿಗಳಲ್ಲಿ ನಿಜಾಂಶವಿದ್ದಲ್ಲಿ ಫೆಬ್ರವರಿ 8 ಅಥವಾ 9 ರಂದು ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. 

 
ನಾಳೆ ಶಶಿಕಲಾ ಎಐಡಿಎಂಕೆ ಶಾಸಕರ ಸಭೆ ಕರೆದಿದ್ದು, ಮುಖ್ಯಮಂತ್ರಿಯಾಗಿ ಅವರನ್ನು ಆಯ್ಕೆ ಮಾಡೋ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. ಆದರೆ ಈ ಕುರಿತು ಇನ್ನು ಸ್ಪಷ್ಟ ಮಾಹಿತಿ ದೊರೆತಿಲ್ಲ.
 
ಜಯಲಲಿತಾ ನಿಧನದ ಬಳಿಕ ಪಕ್ಷದ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೇರಿದ್ದ ಶಶಿಕಲಾ ಮುಖ್ಯಮಂತ್ರಿ ಸ್ಥಾನಕ್ಕೇರಿದರೆ ಪನ್ನೀರ್ ಸೆಲ್ವಂ ಆ ಸ್ಥಾನದಿಂದ ಕೆಳಗಿಳಿಯಬೇಕಾಗುತ್ತದೆ. 
 
ಏತನ್ಮಧ್ಯೆ ಮಹತ್ವದ ಬೆಳವಣಿಗೆಯಲ್ಲಿ ತಮಿಳುನಾಡು ಸರ್ಕಾರದ ಹಿರಿಯ ಸಲಹೆಗಾರರಾಗಿದ್ದ ಶೀಲಾ ಬಾಲಕೃಷ್ಣನ್ ಅವರು ಶುಕ್ರವಾರ ತಮ್ಮ ಸ್ಥಾನವನ್ನು ತೊರೆದಿದ್ದಾರೆ ಎಂದು ತಿಳಿದುಬಂದಿದೆ.
 
2014ರ ಮಾರ್ಚ್ ತಿಂಗಳಲ್ಲಿ ನೇಮಕವಾಗಿದ್ದ ಶೀಲಾ ಬಾಲಕೃಷ್ಣನ್ ಅನಾರೋಗ್ಯಕ್ಕೀಡಾಗಿ ಜಯಲಲಿತಾ ಅವರು ಆಸ್ಪತ್ರೆಗೆ ಸೇರಿದ್ದ  ಸುಮಾರು 75 ದಿನಗಳ ಕಾಲ ತಮಿಳುನಾಡು ಸರ್ಕಾರದ ಕಾರ್ಯ ಚಟುವಟಿಕೆಯನ್ನು ಸಮರ್ಥವಾಗಿ ನಿರ್ವಹಿಸಿದ್ದರು. ಜಯಾ ದಾಖಲಾಗಿದ್ದ ಕೋಣೆಯ ಪಕ್ಕದಲ್ಲಿ ಬೀಡು ಬಿಟ್ಟಿದ್ದ ಅವರು ರಾಜ್ಯವನ್ನು ಸಂಭಾಳಿಸಿದ್ದರು. 
 
ಇದ್ದಕ್ಕಿದ್ದಂತೆ ಅವರು ತಮ್ಮ ಸ್ಥಾನ ತೊರೆದಿರುವುದೀಗ ಬಹುದೊಡ್ಡ ಯಕ್ಷ ಪ್ರಶ್ನೆಯಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಬಜೆಟ್‌ನಿಂದ ರಿಯಲ್ ಎಸ್ಟೇಟ್‌ನ ಗಾಯ ಮಾಯಲಿದೆ