Select Your Language

Notifications

webdunia
webdunia
webdunia
webdunia

ಬಜೆಟ್‌ನಿಂದ ರಿಯಲ್ ಎಸ್ಟೇಟ್‌ನ ಗಾಯ ಮಾಯಲಿದೆ

ಬಜೆಟ್‌ನಿಂದ ರಿಯಲ್ ಎಸ್ಟೇಟ್‌ನ ಗಾಯ ಮಾಯಲಿದೆ
Bangalore , ಶನಿವಾರ, 4 ಫೆಬ್ರವರಿ 2017 (11:29 IST)
ನೋಟು ರದ್ದತಿ ಬಳಿಕ ರಿಯಲ್ ಎಸ್ಟೇಟ್ ಮೇಲೆ ಸ್ವಲ್ಪ ಪೆಟ್ಟು ಬಿದ್ದಿತ್ತು. ಬಜೆಟ್‌ನಲ್ಲಿ ಜನರಿಗೆ ಕೈಗೆಟಕುವ ದರದಲ್ಲಿ ಮನೆಗಳು ಲಭ್ಯವಾಗುವಂತೆ ಕ್ರಮ ಕೈಗೊಂಡಿರುವುದರಿಂದ ರಿಯಲ್ ಎಸ್ಟೇಟ್ ಉದ್ಯಮ ಚೇತರಿಸಿಕೊಳ್ಳುವಂತಾಗಿದೆ ಎಂದು ಕ್ರೆಡಾಯ್ ಕಾರ್ಯದರ್ಶಿ ಎಸ್. ಸುರೇಶ್ ಹರಿ ತಿಳಿಸಿದ್ದಾರೆ.
 
ಕೈಗೆಟಕುವ ದರದಲ್ಲಿ ಮನೆಗಳು ಸಿಗುವಂತೆ ಕ್ರಮ ಕೈಗೊಂಡಿರುವುದು ಸ್ವಾಗತಾರ್ಹ ಮತ್ತು ಶ್ಲಾಘನೀಯ. ಮೊದಲು ನಿರ್ಮಿತ ಪ್ರದೇಶಗಳಿಗೆ ಮಾತ್ರ ಸಾಲ ನೀಡಲಾಗುತ್ತಿತ್ತು. ಆದರೆ,ಈಗ ಮೆಟ್ರೋ ಪ್ರದೇಶದ ಹೊರಗಿನ ಪ್ರದೇಶಗಳಲ್ಲಿ ಬಳಕೆಯ ಪ್ರದೇಶಕ್ಕೂ ಸಾಲ ಸೌಲಭ್ಯವಾಗಲಿದೆ. 
 
ಮೆಟ್ರೋ ಪ್ರದೇಶದ ಹೊರಗಿನ ಪ್ರದೇಶದಲ್ಲಿ 30 ಚ.ಮೀ. ಇರುವ ಮನೆ ನಿರ್ಮಾಣ ನಿಯಮವನ್ನು ಸಡಿಲಿಸಿ 60 ಚದರ ಮೀಟರ್‌ಗೆ ಹೆಚ್ಚಳ ಮಾಡಲಾಗಿದೆ. ಇದು ಡೆವಲಪರ್‍ಸ್‌ಗಳಿಗೆ ಮತ್ತು ಮನೆ ಖರೀದಿ ಮಾಡುವವರಿಗೆ ನೆರವಾಗಲಿದೆ. ಕಡಿಮೆ ದರದಲ್ಲಿ ಮನೆಗಳನ್ನು ಖರೀದಿ ಮಾಡಬಹುದು. 
 
ಅಲ್ಲದೆ, ಇಎಂಐ ಪಾವತಿಯೂ ಸುಲಭವಾಗಲಿದೆ. 2016ನೇ ಸಾಲಿನ ವೇಳೆಗೆ ಬಡವರಿಗಾಗಿ 1 ಕೋಟಿ ಮನೆ ನಿರ್ಮಿಸುವ ಗುರಿ ಹೊಂದಲಾಗಿದೆ. ಇದಕ್ಕಾಗಿ 23 ಸಾವಿರ ಕೋಟಿ ರೂ. ಮೀಸಲಿಡಲಾಗಿದೆ. ಇದರಿಂದ ಬಡವರಿಗೆ ಕಡಿಮೆ ದರದಲ್ಲಿ ಮನೆಗಳು ಲಭ್ಯವಾಗಲಿದ್ದು, ಡೆವಲಪರ್ಸ್‍ಗಳಿಗೂ ಪ್ರಯೋಜನವಾಗಲಿದೆ ಎಂದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಬಜೆಟ್ 2017 ವಿಶ್ಲೇಷಣೆ: ಕೈಗೆಟುಕುವ ದರದಲ್ಲಿ ವಸತಿ