Publish Date: Wed, 27 Jan 2021 (11:08 IST)
Updated Date: Wed, 27 Jan 2021 (11:09 IST)
ಬೆಂಗಳೂರು: ಅಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ಶಿಕ್ಷೆ ಮುಗಿಸಿ ಹೊರಬರುವ ಖುಷಿಯಲ್ಲಿದ್ದ ತಮಿಳುನಾಡಿನ ಚಿನ್ನಮ್ಮ ಶಶಿಕಲಾಗೆ ಕೊರೋನಾ ಅಡ್ಡಿಯಾಗಿದೆ.
ಜೈಲಿನಿಂದ ಹೊರಬಂದು ಮತ್ತೆ ತಮಿಳುನಾಡು ರಾಜಕೀಯಕ್ಕೆ ಧುಮುಕಬೇಕು ಎಂಬ ಹುಮ್ಮಸ್ಸಿನಲ್ಲಿದ್ದ ಶಶಿಕಲಾಗೆ ಈಗ ಕೊರೋನಾಗೆ ಚಿಕಿತ್ಸೆ ಪಡೆಯವ ಸ್ಥಿತಿ ಬಂದಿದೆ. ಹೀಗಾಗಿ ಕೊರೋನಾ ಅಪಾಯದಲ್ಲಿರುವ ಶಶಿಕಲಾ ನಿಯಮಗಳ ಪ್ರಕಾರ 14 ದಿನಗಳ ಕ್ವಾರಂಟೈನ್ ನಲ್ಲಿರಬೇಕು. ಹೀಗಾಗಿ ಅವರ ಬಿಡುಗಡೆ ದಿನ ಪಟಾಕಿ ಸಿಡಿಸಿ ಸಂಭ್ರಮಿಸಿ ಮೆರವಣಿಗೆ ಮಾಡಬೇಕೆಂದಿದ್ದ ಬೆಂಬಲಿಗರ ಪ್ಲ್ಯಾನ್ ಉಲ್ಟಾ ಆಗಿದೆ.