Select Your Language

Notifications

webdunia
webdunia
webdunia
webdunia

ಎಐಡಿಎಂಕೆ ಕಾರ್ಯಕರ್ತೆಯ ಮಗು 'ಜಯಲಲಿತಾ'

ಎಐಡಿಎಂಕೆ ಕಾರ್ಯಕರ್ತೆಯ ಮಗು 'ಜಯಲಲಿತಾ'
ಚೆನ್ನೈ , ಸೋಮವಾರ, 19 ಡಿಸೆಂಬರ್ 2016 (09:13 IST)
ತಮ್ಮ ಮಕ್ಕಳಿಗೆ ಜಯಲಲಿತಾ ಅವರಿಂದ ಹೆಸರಿಡಿಸುವುದರಲ್ಲಿ ಖುಷಿ ಪಡುತ್ತಿದ್ದ ಎಐಡಿಎಂಕೆ ಕಾರ್ಯಕರ್ತರು, ತಮ್ಮ ನೆಚ್ಚಿನ ನಾಯಕಿ ನಿಧನದ ಬಳಿಕ ಶಶಿಕಲಾ ಅವರ ಬೆನ್ನು ಬಿದ್ದಿದ್ದಾರೆ. 
ನಿನ್ನೆ ಭಾನುವಾರ ಥೇಣಿಯಲ್ಲಿ ಆಟೋ ಚಾಲಕ ಸೆಂತಿಲ್ ಕುಮಾರ್ ಮತ್ತು ಅವರ ಪತ್ನಿ ಗಾಯತ್ರಿ ತಮ್ಮ ಮಗುವಿಗೆ ಹೆಸರಿಡಿಸಿಕೊಳ್ಳಲು ದಿವಂಗತ ಜಯಾ ನಿವಾಸ ಪೋಯಸ್ ಗಾರ್ಡನ್‌ಗೆ ಬಂದಿದ್ದರು. ಮಗುವನ್ನೆತ್ತಿಕೊಂಡ ಶಶಿಕಲಾ ಏನು ಹೆಸರಿಡುತ್ತಾರೆ ಎಂದು ಕಾಯುತ್ತಿದ್ದ ಅವರ ಸಂತೋಷಕ್ಕೆ ಪಾರವೇ ಇರಲಿಲ್ಲ. ಕಾರಣ ಆ ಪುಟ್ಟ ಕಂದನಿಗೆ ಜಯಾ ಆಪ್ತೆ , "ಜಯಲಲಿತಾ" ಎಂದು ನಾಮಕರಣ ಮಾಡಿದ್ದರು. 
 
ಅಮ್ಮ ಎಂದು ನಾಡಿನ ಜನರಿಂದ ಕರೆಸಿಕೊಂಡ ನಮ್ಮ ನಾಯಕಿಯ ಹೆಸರಿಟ್ಟಿರುವುದು ನಮ್ಮ ಪುಣ್ಯ. ನಮ್ಮ ಪುತ್ರಿ ಅವರಂತೆ ಹೆಸರು ಮಾಡಲಿ ಎಂದು ದಂಪತಿ ಸಂತಷವನ್ನು ಹಂಚಿಕೊಂಡರು.
 
ಈ ಹಿಂದೆ ಯಾರನ್ನು “ಅಮ್ಮ” ಎಂದು ಕರೆಯುತ್ತಿದ್ದೆವೋ ಅವರ ಹೆಸರನ್ನು ನಮ್ಮ ಮಗುವಿಗೆ ಇಟ್ಟಿರುವುದು ನಮ್ಮ ಪುಣ್ಯ. ನಮ್ಮ ಮಗಳು ಅಮ್ಮ ನಷ್ಟೆ ಹೆಸರು ಮಾಡಲಿ ಎಂದು ದಂಪತಿ ಸಂತಸ ವ್ಯಕ್ತಪಡಿಸಿದ್ರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಚಾಯ್ ವಾಲಾ ಪ್ರಧಾನಿ ಬೆಂಬಲಕ್ಕೆ ಪಾನ್ ವಾಲಾ