Select Your Language

Notifications

webdunia
webdunia
webdunia
webdunia

ಯುಪಿ ಚುನಾವಣೆ: ಸಮಾಜವಾದಿ ಪಕ್ಷ ಏಕಾಂಗಿಯಾಗಿ ಕಣಕ್ಕೆ

ಯುಪಿ ಚುನಾವಣೆ: ಸಮಾಜವಾದಿ ಪಕ್ಷ ಏಕಾಂಗಿಯಾಗಿ ಕಣಕ್ಕೆ
ಲಕ್ನೋ , ಬುಧವಾರ, 28 ಡಿಸೆಂಬರ್ 2016 (17:41 IST)
ಮಹಾಮೈತ್ರಿಕೂಟ ಸಾಧ್ಯತೆಗಳ ಬಗ್ಗೆ ಇದ್ದ ಊಹಾಪೋಹಗಳಿಗೆ ತೆರೆ ಎಳೆದಿರುವ ಸಮಾಜವಾದಿ ಪಕ್ಷ ಬುಧವಾರ ತಾವು ಏಕಾಂಗಿಯಾಗಿ ಕಣಕ್ಕಿಳಿಯುವುದಾಗಿ ಘೋಷಿಸಿದೆ. 
ಪತ್ರಿಕಾಗೋಷ್ಠಿಯನ್ನೆದುರಿಸಿ ಮಾತನಾಡುತ್ತಿದ್ದ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್, ತಾವು ಯಾವುದೇ ಪಕ್ಷದ ಜತೆ ಮೈತ್ರಿಯನ್ನು ಮಾಡಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ.
 
ತಮ್ಮ ಪಕ್ಷದಿಂದ ಕಣಕ್ಕಿಳಿಯಲಿರುವ 325 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆಗೊಳಿಸಿದ ಅವರು, ಉಳಿದ 78 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಸದ್ಯದಲ್ಲೇ ಪ್ರಕಟಿಸುವುದಾಗಿ ಹೇಳಿದ್ದಾರೆ. 
 
ಗಮನಾರ್ಹ ವಿಷಯವೇನೆಂದರೆ ಈ ಸಂದರ್ಭದಲ್ಲಿ ಅವರ ಸಹೋದರ ಶಿವಪಾಲ್ ಯಾದವ್ ಹಾಜರಿದ್ದರು, ಆದರೆ ಪುತ್ರ, ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅನುಪಸ್ಥಿತಿ ಎದ್ದು ಕಾಣುತ್ತಿತ್ತು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ದೆಹಲಿ ಲೆಫ್ಟಿನೆಂಟ್ ಗೌವರ್ನರ್: ನಜೀಬ್ ಜಂಗ್ ಸ್ಥಾನಕ್ಕೆ ಅನಿಲ್ ಬೈಜಾಲ್ ನೇಮಕ