Select Your Language

Notifications

webdunia
webdunia
webdunia
webdunia

ದೆಹಲಿ ಲೆಫ್ಟಿನೆಂಟ್ ಗೌವರ್ನರ್: ನಜೀಬ್ ಜಂಗ್ ಸ್ಥಾನಕ್ಕೆ ಅನಿಲ್ ಬೈಜಾಲ್ ನೇಮಕ

ದೆಹಲಿ ಲೆಫ್ಟಿನೆಂಟ್ ಗೌವರ್ನರ್: ನಜೀಬ್ ಜಂಗ್ ಸ್ಥಾನಕ್ಕೆ ಅನಿಲ್ ಬೈಜಾಲ್ ನೇಮಕ
ನವದೆಹಲಿ , ಬುಧವಾರ, 28 ಡಿಸೆಂಬರ್ 2016 (17:33 IST)
ದೆಹಲಿಯ ಲೆಫ್ಟಿನೆಂಟ್ ಗೌವರ್ನರ್ ನಜೀಬ್ ಜಂಗ್ ನೀಡಿದ ರಾಜೀನಾಮೆಯನ್ನು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅಂಗೀಕರಿಸಿದ್ದು, ಅವರ ಸ್ಥಾನಕ್ಕೆ ಐಎಎಸ್ ಅಧಿಕಾರಿ ಅನಿಲ್ ಬೈಜಾಲ್ ನೇಮಕವಾಗುವ ಸಾಧ್ಯತೆಗಳಿವೆ.  
ಮಾಜಿ ಪ್ರಧಾನಿ ಅಟಲ್ ಬಿಹಾರ್ ವಾಜಪೇಯಿ ಸರಕಾರದಲ್ಲಿ ಗೃಹ ಸಚಿವಾಲಯದ ಕಾರ್ಯದರ್ಶಿ ಸೇರಿದಂತೆ ಇತರ ಸಚಿವಾಲಯಗಳಲ್ಲಿ ಮಹತ್ವದ ಹುದ್ದೆಗಳನ್ನು ನಿರ್ವಹಿಸಿದ್ದ 1969ನೇ ಬ್ಯಾಚ್ ಅಧಿಕಾರಿ ಬೈಜಾಲ್ ಅವರ ನೇಮಕಕ್ಕೆ ಕೇಂದ್ರ ಸರಕಾರ ಗ್ರೀನ್ ಸಿಗ್ನಲ್ ತೋರಿದೆ.
 
ದೆಹಲಿ ಅಭಿವೃದ್ಧಿ ಪ್ರಾಧೀಕಾರದ ಉಪಾಧ್ಯಕ್ಷ ಮತ್ತು ನಗರಾಭಿವೃದ್ಧಿ ಸಚಿವಾಲಯದಲ್ಲಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ ಬೈಜಾಲ್ 2006ರಲ್ಲಿ ಸೇವೆಯಿಂದ ನಿತ್ತರಾಗಿದ್ದರು. ಇದೀಗ ಅವರ ನೇಮಕಾತಿ ದಾಖಲೆಗಳನ್ನು ರಾಷ್ಟ್ರಪತಿಯವರಿಗೆ ರವಾನಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
 
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಸರಕಾರದ ಅವಧಿಯಲ್ಲಿ, 60 ಸಾವಿರ ಕೋಟಿ ವೆಚ್ಚದ ಜವಾಹರಲಾಲ್ ನೆಹರು ನ್ಯಾಷನಲ್ ಅರ್ಬನ್ ರೆನೆುವೆಲ್ ಮಿಷನ್‌ನನ್ನು ಬೈಜಾಲ್ ಯಶಸ್ವಿಯಾಗಿ ಜಾರಿಗೊಳಿಸಿದ್ದರು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಬಿಜೆಪಿ, ಜೆಡಿಎಸ್ ಭ್ರಮೆ ನುಚ್ಚುನೂರು ಮಾಡಿ ಕಾಂಗ್ರೆಸ್ ಅಧಿಕಾರಕ್ಕೆ: ಸಿಎಂ