Select Your Language

Notifications

webdunia
webdunia
webdunia
webdunia

ಸಾರ್ವಕಾಲಿಕ ದಾಖಲೆ ಮಟ್ಟಕ್ಕೆ ಕುಸಿದ ರೂಪಾಯಿ! 78 ದಾಟಿದ ಡಾಲರ್ ಮೌಲ್ಯ!

ಸಾರ್ವಕಾಲಿಕ ದಾಖಲೆ ಮಟ್ಟಕ್ಕೆ ಕುಸಿದ ರೂಪಾಯಿ! 78 ದಾಟಿದ ಡಾಲರ್ ಮೌಲ್ಯ!
bengaluru , ಸೋಮವಾರ, 13 ಜೂನ್ 2022 (14:13 IST)

ಅಮೆರಿಕನ್ ಡಾಲರ್ ವಿರುದ್ಧ ಸತತ ಮೌಲ್ಯ ಕಳೆದುಕೊಳ್ಳುತ್ತಿರುವ ರೂಪಾಯಿ ಸೋಮವಾರ ದಿನದ ವಹಿವಾಟು ಆರಂಭದಲ್ಲೇ 78ರ ಗಡಿದಾಟಿ ಸಾರ್ವಕಾಲಿಕ ಕನಿಷ್ಟ ಮಟ್ಟಕ್ಕೆ ಇಳಿದಿದೆ. ಇದೇ ಮೊದಲ ಬಾರಿಗೆ 78 ಗಡಿ ದಾಟಿದೆ. ವರ್ಷಾಂತ್ಯದ ವೇಳೆಗೆ 80 ರ ಗಡಿದಾಟುವ ನಿರೀಕ್ಷೆ ಇದೆ ಎನ್ನುತ್ತಾರೆ ಮಾರುಕಟ್ಟೆ ತಜ್ಞರು.

ಈ ಹಿಂದೆ 77.79ಕ್ಕೆ ಕುಸಿದು ದಾಖಲೆ ಮಾಡಿತ್ತು. ಸೋಮವಾರ ಆರಂಭದಲ್ಲಿ ಶೇ.0.48ರಷ್ಟು ಕುಸಿತ ದಾಖಲಿಸಿ, 78.22ರಲ್ಲಿ ವಹಿವಾಟು ನಡೆಸಿತು. ರೂಪಾಯಿ ಕುಸಿತದಿಂದಾಗಿ ದೇಶದ ಆರ್ಥಿಕತೆಯ ಮೇಲೆ ತೀವ್ರ ಒತ್ತಡ ಬೀಳಲಿದೆ. ಅದರಲ್ಲೂ ಕಚ್ಚಾ ತೈಲ ಮತ್ತು ಖಾದ್ಯ ತೈಲ ಆಮದುಗಳ ವೆಚ್ಚ ಹೆಚ್ಚಲಿದೆ. ದೇಶೀಯ ಮಾರುಕಟ್ಟೆಯಲ್ಲಿ ಪೆಟ್ರೋಲಿಯಂ ಉತ್ಪನ್ನಗಳು ಮತ್ತು ಖಾದ್ಯ ತೈಲಗಳು ಮತ್ತಷ್ಟು ದುಬಾರಿಯಾಗಬಹುದು.

ಜಾಗತಿಕ ಕರೆನ್ಸಿ ಮಾರುಕಟ್ಟೆಯಲ್ಲಿ ಅಮೆರಿಕನ್ ಡಾಲರ್ ಗೆ ಹೆಚ್ಚಿನ ಬೇಡಿಕೆ ಇದೆ. ಹೀಗಾಗಿ ಬಹುತೇಕ ಎಲ್ಲಾ ರಾಷ್ಟ್ರಗಳ ಕರೆನ್ಸಿಗಳು ಡಾಲರ್ ವಿರುದ್ಧ ಕುಸಿಯುತ್ತಿವೆ. ರೂಪಾಯಿ ಕುಸಿತದಿಂದಾಗು ಮತ್ತೊಂದು ವ್ಯತಿರಿಕ್ತ ಪರಿಣಾಮ ಎಂದರೆ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ತಮ್ಮ ಹೂಡಿಕೆಯನ್ನು ವಾಪಾಸು ಪಡೆಯುತ್ತಾರೆ. ಇದರಿಂದಾಗಿ ದೇಶೀಯ ಷೇರುಪೇಟೆಯು ಕುಸಿತದ ಹಾದಿಯಲ್ಲಿ ಸಾಗಲಿದೆ. ಈ ವರ್ಷದಲ್ಲಿ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಇದುವರೆಗೆ 23.87 ಬಿಲಿಯನ್ ಡಾಲರ್ (1.86 ಲಕ್ಷ ಕೋಟಿ ರೂಪಾಯಿ)ಗಳಷ್ಟು ಹೂಡಿಕೆ ವಾಪಾಸ್ ಪಡೆದಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ವಿಶ್ವದ 2ನೇ ಸುದೀರ್ಘ ಆಳ್ವಿಕೆ ನಡೆಸಿದ ಹಿರಿಮೆ!