ಅಗರ್ತಲಾ : ತ್ರಿಪುರಾದಲ್ಲಿ ಮಹಿಳೆಯರಿಗಾಗಿ 33% ಸರ್ಕಾರಿ ಉದ್ಯೋಗಗಳು,
200 ಕೋಟಿ ವೆಚ್ಚದಲ್ಲಿ ವಿಶ್ವವಿದ್ಯಾಲಯವನ್ನು ನಿರ್ಮಿಸುತ್ತೇವೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಭರವಸೆ ನೀಡಿದರು.
ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ ಅವರು ತ್ರಿಪುರಾದಲ್ಲಿ ಶೇ. 33ರಷ್ಟು ಸರ್ಕಾರಿ ಉದ್ಯೋಗಗಳನ್ನು ಮಹಿಳೆಯರಿಗೆ ಮೀಸಲಿಡಲಾಗುವುದು ಎಂದು ಘೋಷಿಸಿದರು.
ಪ್ರಸ್ತುತ ನಮ್ಮ ಸರ್ಕಾರದ ಅಡಿಯಲ್ಲಿ ರೈತರ ಆದಾಯವು ದ್ವಿಗುಣಗೊಂಡಿದೆ. ತಲಾ ಆದಾಯವು ರೂ 1.3 ಲಕ್ಷಕ್ಕೆ ಏರಿದೆ. ರೈಲಿನ ಮೂಲಕ ಅಗರ್ತಲಾವನ್ನು ದೇಶದ ಇತರ ಭಾಗಗಳೊಂದಿಗೆ ಸಂಪರ್ಕಿಸಲಾಗಿದೆ.
ಒಟ್ಟು 542 ಕಿಮೀ ರಾಷ್ಟ್ರೀಯ ಹೆದ್ದಾರಿಗಳನ್ನು ನಿರ್ಮಿಸಲಾಗಿದೆ. ತ್ರಿಪುರಾದಲ್ಲಿ ನಡೆಯುವ ಘೋರ ಅಪರಾಧಗಳಲ್ಲಿ ಶೇ. 30ರಷ್ಟು ಇಳಿಕೆಯಾಗಿದೆ. ಶಿಕ್ಷೆಯ ಪ್ರಮಾಣವು ಶೇ.5 ರಿಂದ ಶೇ.53ಕ್ಕೆ ಏರಿದೆ ಎಂದು ತಿಳಿಸಿದರು.
ಹಿಂದಿನ ಪ್ರಣಾಳಿಕೆಯಲ್ಲಿ ನೀಡಿದ ಎಲ್ಲಾ ಭರವಸೆಗಳನ್ನು ಆಡಳಿತ ವ್ಯವಸ್ಥೆಯು ಈಡೇರಿಸುತ್ತದೆ. ಮುಂದಿನ ವರ್ಷದ ಆರಂಭದಲ್ಲಿ ಈಶಾನ್ಯ ರಾಜ್ಯ ವಿಧಾನಸಭೆಗೆ ಚುನಾವಣೆ ನಡೆಯಲಿದೆ. ಹೀಗಾಗಿ ಮತ ಕೇಳಲು ತ್ರಿಪುರಾಕ್ಕೆ ಮತ್ತೆ ಹಿಂದಿರುಗುತ್ತೇನೆ ಎಂದರು.