Webdunia - Bharat's app for daily news and videos

Install App

200 ಕೋಟಿಗೆ ಬ್ಲ್ಯಾಕ್ ಮೇಲ್ ಮಾಡಿ ಸಿಕ್ಕಿಬಿದ್ದ ಖ್ಯಾತ ನಟಿ!

Webdunia
ಸೋಮವಾರ, 6 ಸೆಪ್ಟಂಬರ್ 2021 (14:33 IST)
ಬಾಯ್ ಫ್ರೆಂಡ್ ಜೊತೆ ಸೇರಿ ಉದ್ಯಮಿಯೊಬ್ಬರ ಪತ್ನಿಗೆ 200 ಕೋಟಿ ರೂ. ಬ್ಲ್ಯಾಕ್ ಮೇಲ್ ಮಾಡಿದ್ದಕ್ಕಾಗಿ ಖ್ಯಾತ ನಟಿ ಲೀನಾ ಮರಿಯಾ ಪೌಲ್ ಅವರನ್ನು ದೆಹಲಿ ಪೊಲೀಸರು
ಬಂಧಿಸಿದ್ದಾರೆ.
ಹಿಂದಿಯ ಮದ್ರಾಸ್ ಕೆಫೆ ಸೇರಿದಂತೆ ಹಲವು ಜನಪ್ರಿಯ ಚಿತ್ರಗಳಲ್ಲಿ ನಟಿಸಿದ್ದ ಕೇರಳ ಮೂಲದ ನಟಿ ಲೀನಾ ಮರಿಯಾ ಪೌಲ್ ಬಾಯ್ ಫ್ರೆಂಡ್ ಸುಕೇಶ್ ಚಂದ್ರಶೇಖರ್ ಉದ್ಯಮಿಯ ಪತ್ನಿಗೆ 200 ಕೋಟಿ ಬ್ಲ್ಯಾಕ್ ಮೇಲ್ ಗೆ ಒತ್ತಾಯಿಸಿದ್ದ. ಲೀನಾ ಕೂಡಾ ತನ್ನ ಬಾಯ್ ಫ್ರೆಂಡ್ ಕುಕೃತ್ಯದಲ್ಲಿ ಶಾಮೀಲಾಗಿದ್ದಳು ಎಂದು ದೆಹಲಿ ಪೊಲೀಸರು ಮಾಹಿತಿ ನೀಡಿದ್ದಾರೆ.
ಫೋರ್ಟಿಸ್ ಆಸ್ಪತ್ರೆಯ ಸಾರ್ವಜನಿಕ ಸಂಪರ್ಕ ವಿಭಾಗದಲ್ಲಿ ಅಧಿಕಾರಿಯಾಗಿದ್ದ ಶಿವಿಂದರ್ ಮೋಹನ್ ಎಂಬುವವರು ಹವಾಲ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ಸೇರಿದ್ದರು. 
ಈ ಸಂದರ್ಭ ಶಿವಿಂದರ್ ಪತ್ನಿಯನ್ನು ಸಂಪರ್ಕಿಸಿದ್ದ ಆರೋಪಿಗಳು 200 ಕೋಟಿ ರೂ. ಕೊಟ್ಟರೆ ಪತಿಯನ್ನು ಬಿಡುಗಡೆ ಮಾಡಿಸುವುದಾಗಿ ಒತ್ತಾಯಿಸಿದ್ದರು. ಇಲ್ಲದೇ ಹೋದರೆ ತಮ್ಮ ಬಳಿ ಇರುವ ದಾಖಲೆಗಳನ್ನು ಪೊಲೀಸರಿಗೆ ನೀಡಿ ಶಿವಿಂದರ್ ಜೈಲಿನಿಂದ ಹೊರಬಾರದಂತೆ ಮಾಡುವುದಾಗಿ ಬೆದರಿಕೆಯೊಡ್ಡಿದ್ದರು. 
ಈ ಸಂಬಂಧ ಉದ್ಯಮಿ ಪತ್ನಿ ಎಫ್ ಐ ಆರ್ ದಾಖಲಿಸಿದ್ದರು. ಆರೋಪಿ ಸುಕೇಶ್ ಚಂದ್ರಶೇಖರ್ ವಿರುದ್ಧ 21 ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಆಗ ಕಾಲು ಹಿಡಿದಿದ್ದವನು ಈಗ ನನಗೆ ಪಾಠ ಮಾಡುತ್ತಾನಾ: ಬಾಲಕೃಷ್ಣ ವಿರುದ್ಧ ಎಚ್‌ ಡಿ ಕುಮಾರಸ್ವಾಮಿ ಕಿಡಿ

ಪ್ರಪಾತಕ್ಕೆ ಬೀಳುವ ಮುನ್ನಾ ದಿನ ಸಂಬಂಧಗಳ ಬಗ್ಗೆ ಮಾತನಾಡಿದ್ದ ಕುಣಾಲ್ ತಾಯಿ

ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ವಿಧಾನಸೌಧ ಮುತ್ತಿಗೆ: ಅಶೋಕ್‌

ರಾಷ್ಟ್ರೀಯ ಬಿಜೆಪಿಯ ಹೊಸ ಪದಾಧಿಕಾರಿಗಳೊಂದಿಗೆ ನಾಲ್ಕೂವರೆ ಗಂಟೆ ಸಂವಾದ ನಡೆಸಿದ ನರೇಂದ್ರ ಮೋದಿ

22ಅಡಿ ಎತ್ತರದ, 3000ಕೆಜಿ ತೂಕದ ಗಣೇಶ ವಿಗ್ರಹವನ್ನು ಸ್ವಾಗತಿಸುವ ವೇಳೆ ಇದೆಂಥಾ ದುರಂತ, ಇಬ್ಬರು ಸಾವು, Video

ಮುಂದಿನ ಸುದ್ದಿ
Show comments