Robert Vadra: ಮುಸ್ಲಿಮರಿಗೆ ದೇಶದಲ್ಲಿ ತೊಂದರೆಯಾಗ್ತಿದೆ, ಅದಕ್ಕೇ ದಾಳಿ ಮಾಡಿದ್ದಾರೆ ಎಂದ ರಾಬರ್ಟ್ ವಾದ್ರಾ: ಭಾರೀ ಟೀಕೆ

Krishnaveni K
ಬುಧವಾರ, 23 ಏಪ್ರಿಲ್ 2025 (16:45 IST)
ನವದೆಹಲಿ: ಮುಸ್ಲಿಮರಿಗೆ ದೇಶದೊಳಗೆ ತೊಂದರೆಯಾಗ್ತಿದೆ ಅದಕ್ಕೇ ಹಿಂದೂಗಳನ್ನೇ ಟಾರ್ಗೆಟ್ ಮಾಡಿ ಮೋದಿಗೆ ಸಂದೇಶ ಮುಟ್ಟಿಸಲು ಉಗ್ರರು ದಾಳಿ ಮಾಡಿದ್ದಾರೆ ಎಂದು ಸೋನಿಯಾ ಗಾಂಧಿ ಅಳಿಯ ರಾಬರ್ಟ್ ವಾದ್ರಾ ಹೇಳಿದ್ದಾರೆ.

ಅವರ ಹೇಳಿಕೆ ಸಾಕಷ್ಟು ಟೀಕೆಗೆ ಗುರಿಯಾಗಿದೆ. ತಮ್ಮ ಹೇಳಿಕೆ ಮೂಲಕ ಅವರು ಉಗ್ರರ ಕೃತ್ಯವನ್ನೇ ಸಮರ್ಥಿಸಿದಂತಿದೆ. ಮಾಧ್ಯಮಗಳೊಂದಿಗೆ ಮಾತನಾಡಿದ ರಾಬರ್ಟ್ ವಾದ್ರಾ ‘ಉಗ್ರರ ದಾಳಿಗೆ ಮೃತಪಟ್ಟವರಿಗೆ ಸಂತಾಪ ವ್ಯಕ್ತಪಡಿಸುತ್ತಿದ್ದೇನೆ. ಸರ್ಕಾರ ಸದಾ ಹಿಂದುತ್ವದ ಬಗ್ಗೆ ಮಾತನಾಡುತ್ತಿರುತ್ತದೆ. ಅದಕ್ಕೇ ಅಲ್ಪಸಂಖ್ಯಾತರಿಗೆ ಅಸುರಕ್ಷಿತ ಭಾವನೆ ಬರುತ್ತಿದೆ. 

ಈ ಉಗ್ರ ದಾಳಿಯನ್ನೇ ನೀವು ನೋಡುವುದಾದರೆ ಅವರು ಜನರ ಧರ್ಮ ಯಾವುದು ಎಂದು ಗುರುತು ಮಾಡಿ ದಾಳಿ ಮಾಡಿದರು. ಅವರು ಯಾಕೆ ಹೀಗೆ ಮಾಡಿದರು? ಯಾಕೆಂದರೆ ನಮ್ಮ ದೇಶದಲ್ಲಿ ಈಗ ಹಿಂದು ಮತ್ತು ಮುಸ್ಲಿಂ ಎಂದು ಪ್ರತ್ಯೇಕತೆಯ ವಾತಾವರಣ ಬಂದಿದೆ. ಇದರಿಂದಾಗಿಯೇ ಇಂತಹ ಸಂಸ್ಥೆಗಳಿಗೆ ಹಿಂದೂಗಳಿಂದ ಮುಸ್ಲಿಂ ಧರ್ಮಕ್ಕೆ ತೊಂದರೆಯಾಗುತ್ತಿದೆ ಎಂಬ ಭಾವನೆ ಮೂಡಲು ಕಾರಣವಾಗುತ್ತಿದೆ.

ಜನರ ಗುರುತು ಪತ್ತೆ ಹಚ್ಚಿ ಪತ್ತೆ ಮಾಡಿರುವುದು ಮೋದಿಗೆ ಸಂದೇಶ ಮುಟ್ಟಿಸಲು. ಯಾಕೆಂದರೆ ಮುಸ್ಲಿಮರಿಗೆ ದುರ್ಬಲರು ಎಂಬ ಭಾವನೆ ಮೂಡುತ್ತಿದೆ. ನಮ್ಮ ದೇಶ ಜಾತ್ಯಾತೀತ ಎಂಬ ಭಾವನೆ ಬಂದರೆ ಇಂತಹ ಘಟನೆಗಳು ಬಾರದು’ ಎಂದು ರಾಬರ್ಟ್ ವಾದ್ರಾ ಹೇಳಿಕೆ ನೀಡಿದ್ದಾರೆ. ಅವರ ಹೇಳಿಕೆ ವ್ಯಾಪಕ ಟೀಕೆಗೆ ಗುರಿಯಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ನನ್ನ ಬೈಟ್ ತಗೊಳ್ಳಿ ಎಂದು ಪತ್ರಕರ್ತರಿಗೆ ಪ್ರತಾಪ್ ಸಿಂಹ ಅಂಗಲಾಚ್ತಿದ್ದಾರೆ: ಪ್ರಿಯಾಂಕ್ ಖರ್ಗೆ

Karnataka Weather: ವಾರಂತ್ಯದಲ್ಲಿ ಮಳೆಯಿರುತ್ತಾ ಇಲ್ಲಿದೆ ವಿವರ

ಹಲವು ಮಕ್ಕಳ ಕಣ್ಣಿಗೆ ಗಾಯ ಬೆನ್ನಲ್ಲೇ 59 ಕಾರ್ಬೈಡ್ ಗನ್ ವಶಕ್ಕೆ, ಇಬ್ಬರು ಅರೆಸ್ಟ್‌

ಕರ್ನೂಲ್ ಭೀಕರ ಬಸ್ ಬೆಂಕಿ ಅವಘಡ, ಡಿಸಿಎಂ ಡಿಕೆ ಶಿವಕುಮಾರ್ ನೀಡಿದ ಸಲಹೆ ಹೀಗಿದೆ

ಪೊಲೀಸ್ ಅಧಿಕಾರಿಯಿಂದ ಅತ್ಯಾಚಾರ: ಅಂಗೈಯಲ್ಲಿ ಡೆತ್‌ನೋಟ್ ಬರೆದಿಟ್ಟು ವೈದ್ಯೆ ಸೂಸೈಡ್

ಮುಂದಿನ ಸುದ್ದಿ
Show comments