Revant Reddy: ರಾಹುಲ್ ಗಾಂಧಿ ಪ್ರಧಾನಿಯಾಗಿದ್ದಿದ್ದರೆ ಪಾಕಿಸ್ತಾನ ಎರಡು ಪೀಸ್ ಮಾಡ್ತಿದ್ರು: ರೇವಂತ್ ರೆಡ್ಡಿ

Krishnaveni K
ಶುಕ್ರವಾರ, 30 ಮೇ 2025 (15:12 IST)
Photo Credit: X
ಹೈದರಾಬಾದ್: ರಾಹುಲ್ ಗಾಂಧಿ ಪ್ರಧಾನಿಯಾಗಿದ್ದಿದ್ದರೆ ಪಾಕಿಸ್ತಾನವನ್ನು ಎರಡು ಭಾಗ ಮಾಡಿ ಪಿಒಕೆ ನಮ್ಮದಾಗಿಸಿಕೊಳ್ತಿದ್ರು ಎಂದು ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಹೇಳಿದ್ದಾರೆ.

ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ರೇವಂತ್ ರೆಡ್ಡಿ ಆಪರೇಷನ್ ಸಿಂಧೂರ್ ಬಗ್ಗೆ ಮಾತನಾಡಿದ್ದಾರೆ. ಈಗೇನಾದ್ರೂ ಮೋದಿ ಬದಲು ರಾಹುಲ್ ಗಾಂಧಿ ಪ್ರಧಾನಿಯಾಗಿದ್ದಿದ್ದರೆ ಪಾಕಿಸ್ತಾನ ಎರಡು ಭಾಗ ಮಾಡಿ ಪಿಒಕೆಯನ್ನು ವಶಪಡಿಸಿಕೊಳ್ತಿದ್ರು ಎಂದು ಹಾಡಿ ಹೊಗಳಿದ್ದಾರೆ.

‘ದೇಶಕ್ಕೆ ರಾಹುಲ್ ಗಾಂಧಿಯ ನಾಯಕತ್ವ ಅಗತ್ಯವಿತ್ತು. ಅವರು ಇಂದಿರಾ ಗಾಂಧಿ ಸ್ಪೂರ್ತಿಯಿಂದ ಪಾಕಿಸ್ತಾನವನ್ನು ಎರಡು ಭಾಗ ಮಾಡಿ ಪಿಒಕೆ ವಶಪಡಿಸಿಕೊಳ್ತಿದ್ರು’ ಎಂದಿದ್ದಾರೆ. ಪಾಕಿಸ್ತಾನ ವಿರುದ್ಧ ಆಪರೇಷನ್ ಸಿಂಧೂರ್ ನ್ನು ಅರ್ಧಕ್ಕೇ ನಿಲ್ಲಿಸಿ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿರುವ ರೇವಂತ್ ರೆಡ್ಡಿ ಇಂತಹದ್ದೊಂದು ನಿರ್ಧಾರ ತೆಗೆದುಕೊಳ್ಳುವ ಮೊದಲು ಮೋದಿ ಎಲ್ಲಾ ಪಕ್ಷಗಳ ಅಭಿಪ್ರಾಯ ಕೇಳಬಹುದಿತ್ತು ಎಂದಿದ್ದಾರೆ. ಆಪರೇಷನ್ ಸಿಂಧೂರ್ ಸಮಯದಲ್ಲಿ ಪಾಕಿಸ್ತಾನ ನಮ್ಮ ಎಷ್ಟು ರಾಫೆಲ್ ವಿಮಾನಗಳನ್ನು ಹೊಡೆದುರಳಿಸಿದೆ ಎಂದು ಮೋದಿ ದೇಶಕ್ಕೇ ಸತ್ಯ ಹೇಳಲಿ ಎಂದಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಪಾಕಿಸ್ತಾನ ವಿರುದ್ಧ ಕ್ರಿಕೆಟ್ ಗೆದ್ದರೆ ಯುದ್ಧ ಗೆದ್ದಂತಾ: ಬಿಕೆ ಹರಿಪ್ರಸಾದ್ ವ್ಯಂಗ್ಯ

ಕರ್ನಾಟಕ ಜಾತಿ ಸಮೀಕ್ಷೆ ವಿರೋಧಿಸುತ್ತಿರುವ ಬಿಜೆಪಿ ವಿರುದ್ಧ ಸಿಎಂ ಸಿದ್ದರಾಮಯ್ಯ ಫುಲ್ ಗರಂ

ಬೆಂಗಳೂರಿನಲ್ಲಿ ಯಾವಾಗ ಜಾತಿಗಣತಿ ಆರಂಭ: ಇಲ್ಲಿದೆ ಉತ್ತರ

Gold Price: ಚಿನ್ನದ ದರ ಇಂದು ಎಷ್ಟಾಗಿದೆ ನೋಡಿ

Karnataka Weather: ದಸರಾ ಸಂದರ್ಭದಲ್ಲಿ ರಾಜ್ಯದಲ್ಲಿ ಮಳೆಯಿರುತ್ತಾ ಇಲ್ಲಿದೆ ವಿವರ

ಮುಂದಿನ ಸುದ್ದಿ
Show comments