ಪತ್ನಿ ಮತ್ತು ಮಗಳ ಜತೆ ಜಗಳವಾಡಿದ ನಿವೃತ್ತ ಪೈಲಟ್‌ವೊಬ್ಬರು ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾದ ದಾರುಣ ಘಟನೆ ನವದೆಹಲಿಯಲ್ಲಿ ನಡೆದಿದೆ.
ಮೃತ ಆನಂದ್ ಕುಮಾರ್ ಮಯೂರ್ ವಿಹಾರ್‌ನ ಪಶ್ಚಿಮ ದೆಹಲಿಯ ನಿವಾಸಿಯಾಗಿದ್ದು ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರು ಎನ್ನಲಾಗುತ್ತಿದೆ.
61 ವರ್ಷದ ಕುಮಾರ್ ಜರ್ಮನಿಯಲ್ಲಿ ವಾಸವಾಗಿರುವ ತಮ್ಮ ಹಿರಿಯ ಮಗಳನ್ನು ಭೇಟಿ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಶನಿವಾರ ಮಧ್ಯಾಹ್ನ ತಮ್ಮ ಕಿರಿಯ ಮಗಳು ಮತ್ತು ಪತ್ನಿ ಜತೆ ಜಗಳವಾಡಿದರು. ಕೋಪದ ಭರದಲ್ಲಿ ಅವರು ತಮ್ಮ ಬಳಿ ಇದ್ದ ಪಿಸ್ತೂಲ್ ತೆಗೆದು ಮೇಲ್ಛಾವಣಿಗೆ ಗುಂಡು ಹಾರಿಸಿದ್ದಾರೆ. ಇದರಿಂದ ಬೆದರಿದ ತಾಯಿ ಮಗಳು ಅಲ್ಲಿಂದ ಹೊರಗೋಡಿ ಹೋಗಿದ್ದಾರೆ.
ಅವರು ಮರಳಿ ಬಂದು ನೋಡಿದಾಗ ಪೈಲಟ್ ಗುಂಡು ಹಾರಿಸಿಕೊಂಡು ರಕ್ತದ ಮಡುವಿನಲ್ಲಿ ಬಿದ್ದಿದ್ದರು.
ಜೆಟ್ ಏರ್‌ವೇಸ್ ಉದ್ಯೋಗಿಯಾಗಿದ್ದ ಕುಮಾರ್ ಅನಾರೋಗ್ಯದ ಹಿನ್ನೆಲೆಯಲ್ಲಿ ಕೆಲಸದಿಂದ ನಿವೃತ್ತರಾಗಿದ್ದು ಅಂದಿನಿಂದ ಖಿನ್ನರಾಗಿರುತ್ತಿದ್ದರು.ಕೆಲ ವರ್ಷಗಳ ಹಿಂದೆ ಅವರು ಕಿಡ್ನಿ ಕಸಿಗೆ ಒಳಗಾಗಿದ್ದರು ಎಂದು ತಿಳಿದು ಬಂದಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ