Select Your Language

Notifications

webdunia
webdunia
webdunia
webdunia

ರೆಮೆಲ್ ಚಂಡಮಾರುತ, ಉತ್ತರದಲ್ಲಿ ಭಾರೀ ಮಳೆ

Remal Cyclone

Krishnaveni K

ಕೋಲ್ಕೊತ್ತಾ , ಸೋಮವಾರ, 27 ಮೇ 2024 (10:57 IST)
ಕೋಲ್ಕೊತ್ತಾ: ಪಶ್ಚಿಮ ಬಂಗಾಲದ ಕರಾವಳಿಗೆ ರೆಮಲ್ ಚಂಡಮಾರುತ ಬಂದು ಅಪ್ಪಳಿಸಿದ್ದು, ಉತ್ತರದ ರಾಜ್ಯಗಳಿಗೆ ಮಳೆ ನೀಡಿದೆ.

ರೆಮಲ್ ಚಂಡಮಾರುತದಿಂದಾಗಿ ಪಶ್ಚಿಮ ಬಂಗಾಲ, ಬಿಹಾರ ಸೇರಿದಂತೆ ಹಲೆವೆಡೆ ಮಳೆಯಾಗಿದೆ. ರೆಮಲ್ ಚಂಡಮಾರುತದಿಂದಾಗಿ ಜನ ಜೀವನ ಅಸ್ತವ್ಯಸ್ತವಾಗಿದೆ. ಪ.ಬಂಗಾಲ ಮತ್ತು ಬಿಹಾರಕ್ಕೆ ಹೆಚ್ಚು ಪರಿಣಾಮ ಬೀರಿದೆ.

ಇದರಿಂದಾಗಿ ಈ ಎರಡೂ ರಾಜ್ಯಗಳ ರಾಜಧಾನಿ ನಡುವೆ ಓಡಾಡಬೇಕಾಗಿದ್ದ ಎರಡು ವಿಮಾನಗಳ ಹಾರಾಟವನ್ನು ರದ್ದು ಮಾಡಲಾಗಿದೆ. ಇದರಿಂದಾಗಿ ಹಲವು ಪ್ರಯಾಣಿಕರಿಗೂ ತೊಂದರೆಯಾಗಿದೆ. ರೆಮಲ್ ಚಂಡಮಾರುತದಿಂದಾಗಿ ಈಶಾನ್ಯ ರಾಜ್ಯಗಳಲ್ಲಿ ಭಾರೀ ಮಳೆಯಾಗುತ್ತಿದೆ.

ಕೇವಲ ಭಾರತ ಮಾತ್ರವಲ್ಲ, ನೆರೆಯ ಬಾಂಗ್ಲಾದೇಶಕ್ಕೂ ರೆಮಲ್ ಚಂಡಮಾರುತದ ಪರಿಣಾಮ ತಟ್ಟಿದೆ. ಹೀಗಾಗಿ ಅಂತಾರಾಷ್ಟ್ರೀಯ ವಿಮಾನ ಹಾರಾಟದಲ್ಲೂ ವ್ಯತ್ಯಯವಾಗಲಿದೆ. ಚಿರಾಂಗ್, ಗೋಲ್ಪಾರ, ಬಕ್ಸಾ, ಕರೀಮ್ ಗಂಜ್, ಕ್ಯಾಚಾರ್, ಹೈಲಕಂಡಿ ಮುಂತಾದೆಡೆ ರೆಡ್ ಅಲರ್ಟ್ ಘೋಷಿಸಲಾಗಿದೆ.  ಕೆಲವೆಡೆ ಭೂಕುಸಿತವಾದ ಬಗ್ಗೆಯೂ ವರದಿಯಾಗಿದೆ. ಚಂಡಮಾರುತದ ಹಿನ್ನಲೆಯಲ್ಲಿ ಮುಂದಿನ ಎರಡು ದಿನಗಳ ಕಾಲ ಜನರು ಎಚ್ಚರಿಕೆಯಿಂದಿರುವಂತೆ ಸೂಚನೆ ನೀಡಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಬ್ರ್ಯಾಂಡ್‌ ಬೆಂಗಳೂರು ಹೆಸರಲ್ಲಿ ಕಾಂಗ್ರೆಸ್‌ನಿಂದ ಲೂಟಿ: ಕುಮಾರಸ್ವಾಮಿ ಆಕ್ರೋಶ