Publish Date: Wed, 28 Jun 2017 (14:11 IST)
Updated Date: Wed, 28 Jun 2017 (14:13 IST)
ಚುಡಾಯಿಸಲು ಹಿಂಬಾಲಿಸುತ್ತಿದ್ದ ಯುವಕನ ದುರ್ನಡತೆಯ ಬಗ್ಗೆ ರಶ್ಮಿ ಶೆಟ್ಟಿ ಎನ್ನುವ ಯುವತಿ ಸಾಮಾಜಿಕ ಅಂತರ್ಜಾಲ ತಾಣದ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿ ಮಾನ ಹರಾಜು ಹಾಕಿದ್ದಾರೆ.
ಬಿಹಾರ್‌ನಲ್ಲಿ ಉದ್ಯೋಗದಲ್ಲಿರುವ ಮಂಗಳೂರು ಮೂಲದ ಯುವತಿ ರಶ್ಮಿಶೆಟ್ಟಿ, ಯುವಕನ ದರ್ನಡತೆಯ ಬಗ್ಗೆ ಸಂಪೂರ್ಣವಾದ ವಿವರಗಳನ್ನು ಚಿತ್ರಗಳನ್ನು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಇಂತಹ ಕೀಚಕನಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿದ್ದಾರೆ.
ರಶ್ಮಿ ಶೆಟ್ಟಿ ರಸ್ತೆಯ ಮೇಲೆ ತೆರಳುತ್ತಿದ್ದಾಗ ಆಕೆಯನ್ನು ಹಿಂಬಾಲಿಸಿ ಬಂದ ಯುವಕ , ಅಸಭ್ಯ ವರ್ತನೆ ತೋರಿದ್ದಾನೆ.ಇದರಿಂದ ಸಿಡಿಮಿಡಿಗೊಂಡ ರಶ್ಮಿ, ಆತನ ಫೋಟೋ, ಆತನ ಬೈಕ್ ಫೋಟೋವನ್ನು ಕೂಡಾ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಬೈಕ್ ನಂಬರ್ ಆಧಾರದ ಮೇರೆಗೆ ಪೊಲೀಸರು ಕ್ರಮ ಕೈಗೊಳ್ಳಲಿ ಎಂದು ತಿಳಿಸಿದ್ದಾರೆ.
ಆರೋಪಿ ಯುವಕ ನನ್ನ ಬಳಿ ಬಂದು ನನ್ನ ದೇಹವನ್ನು ನೋಡತೊಡಗಿದ್ದ. ನಾನು ಹೆದರುತ್ತೇನೆ ಎಂದು ಭಾವಿಸಿದ್ದ. ಆದರೆ, ನಾನು ಯಾವುದೇ ಕಾರಣಕ್ಕೂ ಹೆದರುವುದಿಲ್ಲ ಎನ್ನುವುದು ನಂತರ ಆತನಿಗೆ ಗೊತ್ತಾಗಿದೆ ಎಂದು ರಶ್ಮಿ ಶೆಟ್ಟಿ ಹೇಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.