Publish Date: Wed, 28 Jun 2017 (13:47 IST)
Updated Date: Wed, 28 Jun 2017 (13:51 IST)
ಬೀಜಿಂಗ್:ಕೆಲವೊಮ್ಮೆ ಈ ಭಕ್ತ ಮಹಾಶಯರ ಭಯ-ಭಕ್ತಿ ಏನೆಲ್ಲ ಫಜೀತಿ ಮಾಡತ್ತೆ ಎಂಬುದಕ್ಕೆ ಈ ಘಟನೆ ಸಾಕ್ಷಿ. ಚೀನಾದ ಈ ಅಜ್ಜಿ ಭಗವಂತಾ ಕಾಪಾಡಪ್ಪಾ ಎನ್ನುತ್ತಾ ವಿಮಾನದ ಎಂಜೀನ್ ಗೆ ನಾಣ್ಯವನ್ನು ಎಸೆದುಬಿಟ್ಟಿದೆ ನೋಡಿ.
ಭಕ್ತರು ದೇವರ ಹುಂಡಿಗೆ, ನದಿಗಳಿಗೆ, ಆರತಿ ತಟ್ಟೆಗೆ ನಾಣ್ಯ ಹಾಕೋದನ್ನು ನಾವು ನೋಡಿದ್ದೇವೆ. ಆದರೆ ಈ ಅಜ್ಜಿ ಹೀಗೇಕೆ ಮಾಡಿದ್ದಾರೆ ಗೊತ್ತಿಲ್ಲ. ಮಗ, ಸೊಸೆಯೊಂದಿಗೆ ಶಾಂಘೈನಿಂದ ಗುವಾಂಗ್‌ಜುಗೆ ಹೊರಟಿದ್ದ ಅಜ್ಜಿ, ವಿಮಾನಹತ್ತುತ್ತಿದ್ದಂತೆ, "ಭಗವಂತಾ, ಕಾಪಾಡಪ್ಪಾ. ಸುರಕ್ಷಿತವಾಗಿ ಕರೆದೊಯ್ಯಪ್ಪಾ' ಎಂದು ಬೇಡುತ್ತಾ ವಿಮಾನದ ಎಂಜಿನ್ ನೊಳಕ್ಕೆ 8 ನಾಣ್ಯಗಳನ್ನು ಎಸೆದಿದ್ದಾರೆ.
7 ನಾಣ್ಯಗಳು ಗುರಿ ತಪ್ಪಿದರೂ ಒಂದು ನಾಣ್ಯ ಮಾತ್ರ ಸರಿಯಾಗಿ ಎಂಜಿನ್‌ನಲ್ಲಿ ಜಾಮ್ ಆಗಿ ಕುಳಿತಿದೆ. ವಿಷಯ ಗೊತ್ತಾಗುತ್ತಿದ್ದಂತೆ ಕಾರ್ಯಪ್ರವೃತ್ತರಾದ ಸಿಬ್ಬಂದಿ, ಎಂಜಿನ್‌ನೊಳಗೆ ಸಿಲುಕಿದ್ದ ನಾಣ್ಯ ಹೊರೆತೆಗೆದಿದ್ದಾರೆ. ಅಜ್ಜಿಯ ಮೂಢನಂಬಿಕೆ ಯಿಂದಾಗಿ 150 ಮಂದಿ ಪ್ರಯಾಣಿಸಬೇಕಿದ್ದ ವಿಮಾನವು ಹಲವು ಗಂಟೆ ವಿಳಂಬವಾಗಿ ಪರದಾಡು ಸ್ಥಿತಿ ನಿರ್ಮಾಣವಾಗಿದೆ.