ಬಾಯ್ ಫ್ರೆಂಡ್ ಜೊತೆ ನೈಟ್ ಔಟ್ ಗೆ ತೆರಳಿದ್ದ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ

ಶನಿವಾರ, 1 ಆಗಸ್ಟ್ 2020 (09:13 IST)
ರಾಯ್ಪುರ : ಬಾಯ್ ಫ್ರೆಂಡ್ ಜೊತೆ ನೈಟ್ ಔಟ್ ಗೆ ತೆರಳಿದ್ದ ಅಪ್ರಾಪ್ತ ಬಾಲಕಿಯರ ಮೇಲೆ ಆಕೆಯ ಸಹೋದರ ಸಂಬಂಧಿ ಯುವಕರು ಅತ್ಯಾಚಾರ ಎಸಗಿದ ಘಟನೆ ಛತ್ತೀಸ್ ಗಢದ ಬಲೋಡಾ ಬಜಾರ್ ಜಿಲ್ಲೆಯ ಪಲಾರಿ ಗ್ರಾಮದಲ್ಲಿ ನಡೆದಿದೆ.

14 ಮತ್ತು 16 ವರ್ಷದ ಅಪ್ರಾಪ್ತ ಸಹೋದರಿಯರು ತಮ್ಮ ಬಾಯ್ ಫ್ರೆಂಡ್ ಜೊತೆ ನೈಟ್ ಔಟ್ ಗೆ ತೆರಳಿದ್ದಾರೆ. ಈ ವಿಚಾರ ತಿಳಿದ ಬಾಲಕಿಯರ ಸಹೋದರ ಸಂಬಂಧಿ ಯುವಕರು ತಮ್ಮ ಸ್ನೇಹಿತರ ಜೊತೆ ಸೇರಿ ಅವರನ್ನು ದಾರಿಯಲ್ಲಿ ಅಡ್ಡಗಟ್ಟಿ ಬಾಯ್ ಫ್ರೆಂಡ್ ಮೇಲೆ ಹಲ್ಲೆ ಮಾಡಿ ಬಾಲಕಿಯರನ್ನು ನಿರ್ಜನ ಪ್ರದೇಶಕ್ಕೆ ಎಳೆದೊಯ್ದು ರೇಪ್ ಎಸಗಿ ಅದನ್ನು ವಿಡಿಯೋ ಮಾಡಿದ್ದಾರೆ. ಮಾತ್ರವಲ್ಲ ಈ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡುವುದಾಗಿ ಬೆದರಿಕೆ ಹಾಕಿ ಮತ್ತೆ ಮತ್ತೆ ಅವರ ಮೇಲೆ ಅತ್ಯಾಚಾರ ಎಸಗಿದ್ದಾರೆ.

ಈ ಬಗ್ಗೆ ಬಾಲಕಿಯರು ಪೊಲೀಸರಿಗೆ ದೂರು ನೀಡಿದ್ದ ಹಿನ್ನಲೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸಹೋದರ ಸಂಬಂಧಿ ಯುವಕರನ್ನು ಸೇರಿ 8 ಮಂದಿ ಯುವಕರನ್ನು ಬಂಧಿಸಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಕೊರೊನಾಗಿಂತ ಭೀಕರವಾಗಿದೆ ಬಿಜೆಪಿಯ ಭೃಷ್ಟಾಚಾರ-ಡಿಕೆಶಿ ಆರೋಪ