Select Your Language

Notifications

webdunia
webdunia
webdunia
webdunia

ಮಾಜಿ ಸೈನಿಕ ಹಾಗೂ ಆತನ ಸ್ನೇಹಿತರಿಂದ ಬಾಲಕಿಯ ಮೇಲೆ ಅತ್ಯಾಚಾರ

ಮಾಜಿ ಸೈನಿಕ ಹಾಗೂ ಆತನ ಸ್ನೇಹಿತರಿಂದ ಬಾಲಕಿಯ ಮೇಲೆ ಅತ್ಯಾಚಾರ
ಆಂಧ್ರಪ್ರದೇಶ , ಮಂಗಳವಾರ, 4 ಡಿಸೆಂಬರ್ 2018 (07:04 IST)
ಆಂಧ್ರಪ್ರದೇಶ : ಮಾಜಿ ಸೈನಿಕನೊಬ್ಬ ಬಾಲಕಿಯ ಜೊತೆಗೆ ಸ್ನೇಹ ಬೆಳೆಸಿ ಆಕೆಯ ಮೇಲೆ ಅತ್ಯಾಚಾರ ಎಸಗಿದ ಘಟನೆ ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯ ಗಿದ್ದಲೂರಿನಲ್ಲಿ ನಡೆದಿದೆ.


ಸುರೇಂದ್ರ (24) ಅತ್ಯಾಚಾರ ಎಸಗಿದ ಮಾಜಿ ಸೈನಿಕನಾಗಿದ್ದು, ಈತ ಬಾಲಕಿಯೊಬ್ಬಳ ಜೊತೆ ಪರಿಚಯ ಬೆಳಸಿಕೊಂಡು ಆಕೆಯನ್ನು ಮದ್ಯವ್ಯಸನೀಯನ್ನಾಗಿ ಮಾಡಿ ನಂತರ ಆಕೆಯ ಮೇಲೆ ಸುರೇಂದ್ರ  ಹಾಗೂ ಆತನ ಸ್ನೇಹಿತರು ನಿರಂತರವಾಗಿ ಅತ್ಯಾಚಾರ ಎಸಗಿದ್ದಾನೆ.


ಈ ವಿಚಾರವನ್ನು ಬಾಲಕಿ ಪೋಷಕರಿಗೆ ತಿಳಿಸಿಲ್ಲವಾದರೂ ಹೇಗೋ ಈ ವಿಚಾರವನ್ನು ತಿಳಿದುಕೊಂಡ ಬಾಲಕಿಯ ಪೋಷಕರು ಪೊಲೀಸ್​ ಠಾಣೆಗೆ ಈ ಬಗ್ಗೆ ದೂರು ಸಲ್ಲಿಸಿದ್ದಾರೆ. ಪೋಕ್ಸೋ ಕಾಯ್ದೆ ಅಡಿ ದೂರು ದಾಖಲಿಸಿಕೊಂಡಿರುವ ಪೊಲೀಸರು ಬಾಲಕಿಯನ್ನ ವಿಚಾರಣೆ ಒಳಪಡಿಸಿದಾಗ ಬಾಲಕಿ ಈ ವಿಚಾರವನ್ನು ಬಹಿರಂಗಪಡಿಸಿದ್ದಾಳೆ.


ಈ ಕೇಸ್​ಗೆ ಸಂಬಂಧಿಸಿದಂತೆ ಪೊಲೀಸರು ಆರು ಜನರನ್ನು ಬಂಧಿಸಿದ್ದಾರೆ. ಆದರೆ ಈ ನಡುವೆ ಮೂವರು ಆರೋಪಿಗಳು ಎಸ್ಕೇಪ್​ ಆಗಿದ್ದು, ಪರಾರಿಯಲ್ಲಿರುವ ಮೂವರಿಗಾಗಿ ಪೊಲೀಸರು ಶೋಧ ಕಾರ್ಯ ಕೈಗೊಂಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಓಲಾ ಚಾಲಕನನ್ನು ಅಪಹರಿಸಿ, ಹಣಕ್ಕಾಗಿ ಆತನ ಪತ್ನಿಯನ್ನು ಬೆತ್ತಲೆಗೊಳಿಸಿದ ದುಷ್ಕರ್ಮಿಗಳು