Publish Date: Sun, 02 Dec 2018 (06:59 IST)
Updated Date: Sun, 02 Dec 2018 (07:23 IST)
ಥಾಣೆ : ದೆವ್ವ ಬಿಡಿಸುವ ನೆಪದಲ್ಲಿ 35 ವರ್ಷದ ಮಹಿಳೆಯೊಬ್ಬಳ ಮೇಲೆ ಡೊಂಗಿ ಬಾಬ ಒಬ್ಬ ಅತ್ಯಾಚಾರ ಎಸಗಿದ ಘಟನೆ ಥಾಣೆಯಲ್ಲಿ ನಡೆದಿದೆ.
ನೂರ್ ಮೊಹಮ್ಮದ್ ಶೇಖ್(49) ಅತ್ಯಾಚಾರ ಎಸಗಿದ ಡೊಂಗಿ ಬಾಬನಾಗಿದ್ದು, ಈತ ಮಹಿಳೆಗೆ ಹಿಡಿದಿರುವ ದೆವ್ವ ಬಿಡಿಸುವ ನೆಪ ಹೇಳಿ 2015ರಿಂದ ಆಕೆಯಿಂದ ಬರೋಬ್ಬರಿ 1.48 ಲಕ್ಷ ಹಣ ವಸೂಲಿ ಮಾಡಿದ್ದಲ್ಲದೇ ಆಕೆಯ ತಾಯಿಯಿಂದ 30 ಸಾವಿರ ನಗದು ಹಣ ವಸೂಲಿ ಮಾಡಿದ್ದಾನೆ. ಇಷ್ಟೇ ಅಲ್ಲದೇ ಮಹಿಳೆಯ ಮೇಲೆ ನಿರಂತರ ಅತ್ಯಾಚಾರ ಎಸಗಿದ್ದಾನೆ. ಈ ಕೃತ್ಯವನ್ನು ವಿಡಿಯೋ ಮಾಡಿಕೊಂಡ ಆತನ ಪತ್ನಿ ರುಬಿನಾ ಎಂಬಾಕೆ ಮಹಿಳೆಗೆ ಬೆದರಿಕೆಯೊಡ್ಡಿ 50 ಸಾವಿರ ಹಣದ ಬೇಡಿಕೆ ಇಟ್ಟಿದ್ದಾಳೆ.
ಈ ಘಟನೆಯಿಂದ ನೊಂದ ಮಹಿಳೆ ಇದೀಗ ಬಾಬ ಹಾಗೂ ಆತನ ಪತ್ನಿಯ ಮೇಲೆ ದೂರು ದಾಖಲಿಸಿದ್ದು, ಪೊಲೀಸರು ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.