ಆಕಸ್ಮಿಕ ಬೆಂಕಿ ಬಿದ್ದ ಪರಿಣಾಮ ಅಪಾರ ಪ್ರಮಾಣದ ಮುಸುಕಿನ ಜೋಳದ ರಾಶಿ ಸುಟ್ಟು ಭಸ್ಮವಾದ ಘಟನೆ ನಡೆದಿದೆ. ಹಾವೇರಿ  ತಾಲೂಕಿನ ಗುತ್ತಲ ಪಟ್ಟಣದಲ್ಲಿ ಈ ಘಟನೆ ನಡೆದಿದೆ.
									
			
			 
 			
 
 			
					
			        							
								
																	ಗುತ್ತಲ ಪಟ್ಟಣದ ಮಲ್ಲಕಪ್ಪ ನಂದಿ ಎಂಬುವವರಿಗೆ ಸೇರಿದ ಮುಸುಕಿನ ಜೋಳದ ರಾಶಿ ಸಂಪೂರ್ಣ ಭಸ್ಮವಾಗಿದೆ. ಇವರು ತಮ್ಮ ಹೊಲದಲ್ಲಿ ಸಂಗ್ರಹಿಸಿದ್ದ 2 ಲಕ್ಷ ರೂ. ಗಳಿಗೂ ಹೆಚ್ಚಿನ ಮೌಲ್ಯದ, 10 ಟ್ರ್ಯಾಕ್ಟರ್ ಮುಸುಕಿನ ಜೋಳದ ರಾಶಿಯು ಆಕಸ್ಮಿಕ ಬೆಂಕಿಯಿಂದ ಸುಟ್ಟು ಕರಕಲಾಗಿದೆ.
									
										
								
																	ರಾಶಿಯ ಮಾಲಿಕ ರೈತ ಮಲ್ಲಕ್ಕಪ್ಪ ಮುಸುಕಿನ ಜೋಳ ನಾಶವಾಗಿದಕ್ಕೆ ನೊಂದು ಸೂಕ್ತ ಪರಿಹಾರ ನೀಡುವಂತೆ ಆಗ್ರಹಿಸಿದ್ದಾರೆ. ಈ ಕುರಿತು ಗುತ್ತಲ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.