Select Your Language

Notifications

webdunia
webdunia
webdunia
webdunia

ಮನೆ ಕೆಲಸದ ಅಪ್ರಾಪ್ತೆಯ ಮೇಲೆ ನಿರಂತರ ಅತ್ಯಾಚಾರ ಆರೋಪ: ಅಸ್ಸಾಂನ ಡಿವೈಎಸ್‌ಪಿ ಅರೆಸ್ಟ್‌

Rape Case

Sampriya

ನವದೆಹಲಿ , ಸೋಮವಾರ, 18 ಮಾರ್ಚ್ 2024 (15:43 IST)
ನವದೆಹಲಿ: ಅಪ್ರಾಪ್ತೆಯ ಮೇಲೆ ನಿರಂತರ ಅತ್ಯಾಚಾರ ಎಸಗಿದ ಆರೋಪದಡಿಯಲ್ಲಿ ಅಸ್ಸಾಂನ ಉಪ ಪೊಲೀಸ್ ವರಿಷ್ಠಾಧಿಕಾರಿಯನ್ನು ಬಂಧಿಸಲಾಗಿದೆ. ಬಂಧಿತ ಪೊಲೀಸ್‌ನ್ನು ಕಿರಣ್ ನಾಥ್ ಎಂದು ಗುರುತಿಸಲಾಗಿದೆ. 
 
ಇವರು ಗೋಲಘಾಟ್ ಜಿಲ್ಲೆಯ ಲಚಿತ್ ಬೊರ್ಪುಕನ್ ಪೊಲೀಸ್ ಠಾಣೆಯಲ್ಲಿ ಕರ್ತವ್ಯದಲ್ಲಿದ್ದರು. 15 ವರ್ಷದ ಬಾಲಕಿ ಮೇಲೆ ಹಿರಿಯ ಪೊಲೀಸ್ ಅಧಿಕಾರಿ ನಿರಂತರ ಅತ್ಯಚಾರ ಎಸಗಿದ್ದಾನೆ ಎಂದು ಆರೋಪದಡಿಯಲ್ಲಿ ಬಂಧಿಸಲಾಗಿದೆ.  
 
ಬಲವಂತವಾಗಿ ಮನೆಯಲ್ಲಿ ಕೂಡಿ ಹಾಕಿ ಚಿತ್ರಹಿಂಸೆ ನೀಡಿ, ಅತ್ಯಚಾರ ಎಸಗಿದ್ದಾನೆ ಎಂದು ಬಾಲಕಿ ಪೋಷಕರು ಶನಿವಾರ ದೇರ್ಗಾಂವ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.  ಭಾನುವಾರ ಆತನ ವಿರುದ್ಧ ಪ್ರಕರಣ ದಾಖಲಾಗಿದೆ.
 
ಅಸ್ಸಾಂ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಜ್ಞಾನೇಂದ್ರ ಪ್ರತಾಪ್ ಸಿಂಗ್ ಮಾತನಾಡಿ, ತನಿಖೆಯ ವೇಳೆ ದೊರೆತಿರುವ ಸಾಕ್ಷ್ಯದ ಆಧಾರದ ಮೇಲೆ ನಾಥ್ ಅವರನ್ನು ಬಂಧಿಸಲಾಗಿದೆ ಎಂದರು.
 
ನಾಥ್ ಅವರನ್ನು ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 376 (ಹದಿನಾರು ವರ್ಷದೊಳಗಿನ ಮಹಿಳೆಯ ಮೇಲೆ ಅತ್ಯಾಚಾರ), 506 (ಕ್ರಿಮಿನಲ್ ಬೆದರಿಕೆ) ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯಿದೆ (ಪೋಕ್ಸೊ), 2012 ರ ಸೆಕ್ಷನ್ 6 ರ ಅಡಿಯಲ್ಲಿ ಬಂಧಿಸಲಾಗಿದೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಟಾಲಿವುಡ್‌ಗೆ ಎಂಟ್ರಿ ಕೊಟ್ಟ ಬಿಗ್ಬಾಸ್‌ ವಿನ್ನರ್ ರೂಪೇಶ್: ಇದೊಂದು ಅದ್ಭುತ ಕ್ಷಣ ಎಂದಿದ್ದೇಕೆ!