Select Your Language

Notifications

webdunia
webdunia
webdunia
webdunia

ವಿಧಾನಸಭೆ ಚುನಾವಣೆ: ಅರುಣಾಚಲ, ಸಿಕ್ಕಿಂ ರಾಜ್ಯಗಳ ಮತ ಎಣಿಕೆ ದಿನಾಂಕ ಬದಲಾವಣೆ

ವಿಧಾನಸಭೆ ಚುನಾವಣೆ: ಅರುಣಾಚಲ, ಸಿಕ್ಕಿಂ ರಾಜ್ಯಗಳ ಮತ ಎಣಿಕೆ ದಿನಾಂಕ ಬದಲಾವಣೆ

Sampriya

ನವದೆಹಲಿ , ಭಾನುವಾರ, 17 ಮಾರ್ಚ್ 2024 (17:52 IST)
ನವದೆಹಲಿ:  ಅರುಣಾಚಲ ಪ್ರದೇಶ ಮತ್ತು ಸಿಕ್ಕಿಂನಲ್ಲಿ ರಾಜ್ಯಗಳ ವಿಧಾನಸಭೆ ಚುನಾವಣೆಯ  ಮತ ಎಣಿಕೆ ದಿನಾಂಕವನ್ನು ಜೂನ್ 4ರ ಬದಲಾಗಿ ಜೂನ್ 2ರಂದು ಮತ ಎಣಿಕೆ ನಡೆಯಲಿದೆ ಎಂದು ಭಾನುವಾರ ಚುನಾವಣಾ ಆಯೋಗ ತಿಳಿಸಿದೆ. 
 
ಆದರೆ ಎರಡೂ ರಾಜ್ಯಗಳ ವಿಧಾನಸಭಾ ಚುನಾವಣೆಗೆ ಏಪ್ರಿಲ್ 19 ರಂದು ಮತದಾನ ನಡೆಯಲಿದೆ. ಅರುಣಾಚಲ ಪ್ರದೇಶ ಮತ್ತು ಸಿಕ್ಕಿಂ ಎರಡೂ ರಾಜ್ಯಗಳ ಅಸೆಂಬ್ಲಿಗಳ ಅಧಿಕಾರಾವಧಿಯು 02 ಜೂನ್ 2024 ರಂದು ಕೊನೆಗೊಳ್ಳಲಿದೆ.
 
"ಅರುಣಾಚಲ ಪ್ರದೇಶ ಮತ್ತು ಸಿಕ್ಕಿಂ ವಿಧಾನಸಭೆಗಳಿಗೆ ತಮ್ಮ ಅವಧಿ ಮುಗಿಯುವ ಮೊದಲು ಚುನಾವಣೆಯನ್ನು ನಡೆಸುವುದು." ಎಂದು ಹೇಳಿದ್ದು, ಎರಡೂ ಅಸೆಂಬ್ಲಿಗಳ ಅವಧಿಯು ಜೂನ್ 2 ರಂದು ಮುಕ್ತಾಯಗೊಳ್ಳಲಿದೆ ಎಂದು ಹೇಳಿದೆ.
 
"ಇದನ್ನು ಗಮನದಲ್ಲಿಟ್ಟುಕೊಂಡು, ಅರುಣಾಚಲ ಪ್ರದೇಶ ಮತ್ತು ಸಿಕ್ಕಿಂ ರಾಜ್ಯಗಳ ವಿಧಾನಸಭೆಗಳಿಗೆ ಸಾರ್ವತ್ರಿಕ ಚುನಾವಣೆಯ ವೇಳಾಪಟ್ಟಿಗೆ ಸಂಬಂಧಿಸಿದಂತೆ ಈ ಕೆಳಗಿನವುಗಳನ್ನು ತಿದ್ದುಪಡಿ ಮಾಡಲು ಆಯೋಗವು ನಿರ್ಧರಿಸಿದೆ" ಎಂದು ಹೇಳಿಕೆಯಲ್ಲಿ ಸೇರಿಸಲಾಗಿದೆ.
 
ಅರುಣಾಚಲ ಪ್ರದೇಶ ಮತ್ತು ಸಿಕ್ಕಿಂ ವಿಧಾನಸಭಾ ಚುನಾವಣೆಗಳು ಏಪ್ರಿಲ್ 19 ರಂದು ನಡೆಯಲಿದೆ. ಅರುಣಾಚಲ ಪ್ರದೇಶದಲ್ಲಿ ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕವನ್ನು ಮಾರ್ಚ್ 27 ಎಂದು ನಿಗದಿಪಡಿಸಲಾಗಿದೆ ಮತ್ತು ಉಮೇದುವಾರಿಕೆಗಳನ್ನು ಹಿಂಪಡೆಯಲು ಕೊನೆಯ ದಿನಾಂಕವನ್ನು ಏಪ್ರಿಲ್ 19 ಎಂದು ನಿಗದಿಪಡಿಸಲಾಗಿದೆ. ಶನಿವಾರ ಘೋಷಿಸಿದಂತೆ, 2024 ರ ಲೋಕಸಭೆ ಚುನಾವಣೆಯು ಏಪ್ರಿಲ್ 19 ರಿಂದ ಜೂನ್ ವರೆಗೆ 7 ಹಂತಗಳಲ್ಲಿ ನಡೆಯಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಉತ್ತರಾಖಂಡ ಕಾಂಗ್ರೆಸ್‌ಗೆ ಹೊಡೆತ: ಬಿಜೆಪಿ ಕೈ ಹಿಡಿದ ಶಾಸಕ ರಾಜೇಂದ್ರ ಸಿಂಗ್ ಭಂಡಾರಿ