Select Your Language

Notifications

webdunia
webdunia
webdunia
webdunia

ಸೋದರಮಾವನಿಂದ ಅತ್ಯಾಚಾರ; 40 ವರ್ಷದ ಮಹಿಳೆಯಿಂದ ಆರೋಪ

ಸೋದರಮಾವನಿಂದ ಅತ್ಯಾಚಾರ; 40 ವರ್ಷದ ಮಹಿಳೆಯಿಂದ ಆರೋಪ
ನವದೆಹಲಿ , ಬುಧವಾರ, 11 ಡಿಸೆಂಬರ್ 2019 (06:33 IST)
ನವದೆಹಲಿ : 40 ವರ್ಷದ ಮಹಿಳೆಯೊಬ್ಬಳು 4 ವರ್ಷಗಳಿಂದ ತನ್ನ ಮೇಲೆ ಸೋದರ ಮಾವ ಅತ್ಯಾಚಾರ ಎಸಗುತ್ತಿದ್ದಾನೆ ಎಂದು ಆರೋಪಿಸಿ ದೆಹಲಿ ಕೋರ್ಟ್ ನ ಮೊರೆ ಹೋಗಿದ್ದಾಳೆ.



ತಾನು ನಾಲ್ಕು ವರ್ಷದವಳಾಗಿದ್ದಾಗಿನಿಂದಲೂ ಆತ ತನ್ನ ಮೇಲೆ ಅತ್ಯಾಚಾರ ಎಸಗಿದ್ದು, ನಂತರ ತನ್ನ ಸೋದರಿಯನ್ನು ಮದುವೆಯಾಗಿ ತಮ್ಮ ಮನೆಯಲ್ಲೇ ವಾಸವಾಗಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಇದರಿಂದ ತಾನು 3 ಶಸ್ತ್ರಚಿಕಿತ್ಸೆ ಒಳಗಾಗಿದ್ದೇನೆ. ಈ ಬಗ್ಗೆ ನಮ್ಮ ಕುಟುಂಬದವರಿಗೆ ಹೇಳಿದರೂ ಅವರು ಯಾರಿಗೆ ಹೇಳಬೇಡ ಎಂದು ಬೆದರಿಸಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾಳೆ.


ಈ ಹಿನ್ನಲೆಯಲ್ಲಿ ಮಹಿಳೆ ಕೋರ್ಟ್ ನ ಮೊರೆ ಹೋದ ಹಿನ್ನಲೆ ಈಗಾಗಲೇ ವಿಚಾರಣೆ ಎದುರಿಸುತ್ತಿರುವ ಆರೋಪಿಯ ವಿರುದ್ಧ ಐಪಿಸಿ ಸೆಕ್ಷನ್  ಗಳಡಿ ಅತ್ಯಾಚಾರ ಹಾಗೂ ಬೆದರಿಕೆ  ಒಡ್ಡಿದರ ಆಧಾರದ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ನ್ಯಾಯಾಧೀಶರು ಸೂಚಿಸಿದ್ದಾರೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಪೌರತ್ವ ತಿದ್ದುಪಡಿ ಮಸೂದೆ; ಅಮಿತ್ ಶಾ ವಿರುದ್ಧ ನಿರ್ಬಂಧಕ್ಕೆ ಆಗ್ರಹ