Select Your Language

Notifications

webdunia
webdunia
webdunia
webdunia

ದೂರು ಕೊಡಲು ಬಂದ ಮಹಿಳೆಗೆ ರೇಪ್ ಆದ ಮೇಲೆ ಬಾ ಎಂದ ಪೊಲೀಸರು!

ದೂರು ಕೊಡಲು ಬಂದ ಮಹಿಳೆಗೆ ರೇಪ್ ಆದ ಮೇಲೆ ಬಾ ಎಂದ ಪೊಲೀಸರು!
ಲಕ್ನೋ , ಸೋಮವಾರ, 9 ಡಿಸೆಂಬರ್ 2019 (10:15 IST)
ಲಕ್ನೋ: ದೇಶದೆಲ್ಲೆಡೆ ಅತ್ಯಾಚಾರ ಪ್ರಕರಣದ ಬಗ್ಗೆ ಮತ್ತು ಸಂತ್ರಸ್ತರ ಜತೆಗೆ ಪೊಲೀಸರು ನಡೆದುಕೊಳ್ಳುತ್ತಿರುವ ಬಗ್ಗೆ ಆಕ್ರೋಶ ವ್ಯಕ್ತವಾಗುತ್ತಿದ್ದರೂ ಮತ್ತೆ ಅಂತಹದ್ದೇ ಘಟನೆಗಳು ನಡೆಯುತ್ತಿವೆ.


ತನ್ನ ಮೇಲೆ ಅತ್ಯಾಚಾರ ಯತ್ನ ನಡೆದಿದೆ ಎಂದು ಮಹಿಳೆಯೊಬ್ಬರು ದೂರು ಕೊಡಲು ಬಂದರೆ ಉತ್ತರ ಪ್ರದೇಶದ ಹಿಂದೂಪುರ ಗ್ರಾಮದಲ್ಲಿ ಪೊಲೀಸರು ಉದ್ಧಟತನ ತೋರಿದ್ದಾರೆ.

ದೂರು ಕೊಡಲು ಬಂದ ಮಹಿಳೆಗೆ ‘ರೇಪ್ ಆದ ಮೇಲೆ ಬಾ’ ಎಂದು ಉಡಾಫೆಯ ಉತ್ತರ ಕೊಟ್ಟಿದ್ದಾರೆ. ದೂರು ಸ್ವೀಕರಿಸಲು ನಿರಾಕರಿಸಿದ ಪೊಲೀಸರು ನಿನ್ನ ಮೇಲೆ ಅತ್ಯಾಚಾರ ನಡೆದಿಲ್ಲವಲ್ಲ. ನಡೆದ ಮೇಲೆ ಬಾ ಎಂದು ಉಡಾಫೆಯಿಂದ ಉತ್ತರಿಸಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾಳೆ. ಇನ್ನು, ಈಕೆಯ ಮನೆ ಮುಂದೆ ಆರೋಪಿಗಳು ದೂರು ಕೊಡದಂತೆ ಬೆದರಿಕೆ ಒಡ್ಡುತ್ತಿದ್ದಾರೆ ಎನ್ನಲಾಗಿದೆ. ಉನ್ನಾವೋ ಪ್ರಕರಣದಲ್ಲೂ ಇದೇ ರೀತಿ ಆಗಿತ್ತು. ಹಾಗಿದ್ದರೂ ಪೊಲೀಸರು ಎಚ್ಚೆತ್ತುಕೊಳ್ಳದೇ ಇರುವುದು ದುರಂತವೇ ಸರಿ.

Share this Story:

Follow Webdunia kannada

ಮುಂದಿನ ಸುದ್ದಿ

ಅಂಚೆ ಮತದಲ್ಲಿ 250ಕ್ಕೆ 250 ಮತ ಪಡೆದ ಆನಂದ್ ಸಿಂಗ್