Select Your Language

Notifications

webdunia
webdunia
webdunia
webdunia

ದಿಶಾ ರವಿ ಪರ ನಟಿ ರಮ್ಯಾ ಬ್ಯಾಟಿಂಗ್

ದಿಶಾ ರವಿ
ನವದೆಹಲಿ: ರೈತ ಪ್ರತಿಭಟನೆ ಬಗ್ಗೆ ಪರಿಸರ ಹೋರಾಟಗಾರ್ತಿ ಗ್ರೇಟಾ ಥನ್ ಬರ್ಗ್ ಟ್ವೀಟ್ ಮಾಡಿದ್ದ ‘ಟೂಲ್ ಕಿಟ್’ ತಿದ್ದುಪಡಿ ಮಾಡಿದ್ದಳು ಎಂಬ ಆರೋಪದಲ್ಲಿ ಬಂಧಿತರಾಗಿರುವ ದಿಶಾ ರವಿ ಪರ ಸ್ಯಾಂಡಲ್ ವುಡ್ ನಟಿ, ಕಾಂಗ್ರೆಸ್ ನಾಯಕಿ ರಮ್ಯಾ ಬ್ಯಾಟಿಂಗ್ ಮಾಡಿದ್ದಾರೆ.


ಭಾರತ ಸರ್ಕಾರದ ವಿರುದ್ಧ ದೊಡ್ಡ ಸಂಚಿನಲ್ಲಿ ಆಕೆ ಭಾಗಿಯಾಗಿದ್ದಾಳೆಂಬ ಆರೋಪದಲ್ಲಿ ಆಕೆಯ ಮೇಲೆ ಪ್ರಕರಣ ದಾಖಲಾಗಿದೆ. ಈ ಬಗ್ಗೆ ಇನ್ ಸ್ಟಾಗ್ರಾಂನಲ್ಲಿ ಬರೆದುಕೊಂಡಿರುವ ರಮ್ಯಾ ‘ಒಬ್ಬ ಯುವ, ಪ್ರಾಮಾಣಿಕ ಹೋರಾಟಗಾರ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಹಾಗಿದ್ದರೆ ಇದೇ ಟೂಲ್ ಕಿಟ್ ಶೇರ್ ಮಾಡಿದ ಬಾಲಿವುಡ್ ನಟರನ್ನೂ ಬಂಧಿಸುತ್ತೀರಾ? ರೈತರನ್ನು ಬೆಂಬಲಿಸುವವರೆಲ್ಲಾ ಉಗ್ರರೇ?’ ಎಂದು ಕಿಡಿ ಕಾರಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಪತ್ನಿ, ಮಗಳನ್ನು ಹತ್ಯೆ ಮಾಡಿ ಚರಂಡಿಗೆ ಬಿಸಾಕಿದ ಪತಿ