Select Your Language

Notifications

webdunia
webdunia
webdunia
webdunia

ನಪುಂಸಕನಾಗಿದ್ದರೆ ನಿಂಗೆ ಮಕ್ಕಳಾಗಿದ್ದು ಹೇಗೆ? ಡೇರಾ ಬಾಬಾನಿಗೆ ಪ್ರಶ್ನೆ!

ನಪುಂಸಕನಾಗಿದ್ದರೆ ನಿಂಗೆ ಮಕ್ಕಳಾಗಿದ್ದು ಹೇಗೆ? ಡೇರಾ ಬಾಬಾನಿಗೆ ಪ್ರಶ್ನೆ!
ನವದೆಹಲಿ , ಶುಕ್ರವಾರ, 1 ಸೆಪ್ಟಂಬರ್ 2017 (09:41 IST)
ನವದೆಹಲಿ: ಅತ್ಯಾಚಾರ ಆರೋಪದಲ್ಲಿ ಜೈಲು ಸೇರಿರುವ ಡೇರಾ ಮುಖ್ಯಸ್ಥ ರಾಮ್ ರಹೀಂ ಸಿಂಗ್ ತಾನು ನಪುಂಸಕ, ಅತ್ಯಾಚಾರ ನಡೆಸಲು ಸಾಧ್ಯವಿಲ್ಲ ಎಂದಿದ್ದನಂತೆ! ಇದಕ್ಕೆ ನ್ಯಾಯಾಧೀಶರು ಹಾಗಿದ್ದರೆ ನಿನಗೆ ಮಕ್ಕಳಾಗಿದ್ದು ಹೇಗೆ ಎಂದು ಪ್ರಶ್ನಿಸಿದ್ದಾರೆ ಎನ್ನಲಾಗಿದೆ.

 
ಸಿಬಿಐ ನ್ಯಾಯಾಲಯದಲ್ಲಿ ತಾನು ನಿರಪರಾಧಿ ಎಂದು ಸಾಬೀತುಪಡಿಸಲು ಬಾಬಾ ಹಲವು ಸುಳ್ಳು ದಾಖಲೆಗಳನ್ನು ಒದಗಿಸಿದ್ದ ಎನ್ನಲಾಗಿದೆ. ಇದರಲ್ಲಿ ತಾನು ನಪುಂಸಕ. ಅತ್ಯಾಚಾರ  ನಡೆಸಲು ಲೈಂಗಿಕವಾಗಿ ಅಸಮರ್ಥ ಎಂದು ವಾದಿಸಿರುವುದೂ ಒಂದು.

ಆದರೆ ಬಾಬಾನ ವಾದವನ್ನು ತಳ್ಳಿ ಹಾಕಿದ ನ್ಯಾಯಾಧೀಶರು ಹಾಗಿದ್ದರೆ, ನಿನಗೆ ಪುತ್ರಿಯರು ಹುಟ್ಟಿದ್ದು ಹೇಗೆ ಎಂದು ಪ್ರಶ್ನಿಸಿದ್ದಾರೆ ಎನ್ನಲಾಗಿದೆ. 1990 ರಿಂದ ತಾನು ಲೈಂಗಿಕವಾಗಿ ಅಸಮರ್ಥ ಎಂದಿದ್ದ. ಆದರೆ ಆತನಿಗೆ ಇಬ್ಬರು ಪುತ್ರಿಯರಿರುವುದು ಈ ವಾದ ಸುಳ್ಳು ಎನ್ನುವುದನ್ನು ಸಾಬೀತುಪಡಿಸುತ್ತದೆ ಎಂದು ನ್ಯಾಯಾಲಯ ಮನಗಂಡು ಶಿಕ್ಷೆ ವಿಧಿಸಿತು.

ಇದನ್ನೂ ಓದಿ.. ಕೇಂದ್ರ ಸಚಿವ ಸ್ಥಾನಕ್ಕೆ ಉಮಾಭಾರತಿ ರಾಜೀನಾಮೆ
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಕೇಂದ್ರ ಸಚಿವ ಸ್ಥಾನಕ್ಕೆ ಉಮಾಭಾರತಿ ರಾಜೀನಾಮೆ