Select Your Language

Notifications

webdunia
webdunia
webdunia
webdunia

ಬಿಜೆಪಿ ಸೇರುತ್ತಾರೆಂಬ ಊಹಾಪೋಹಗಳಿಗೆ ರಜಿನಿ ಕೊಟ್ಟ ಉತ್ತರ

ಬಿಜೆಪಿ ಸೇರುತ್ತಾರೆಂಬ ಊಹಾಪೋಹಗಳಿಗೆ ರಜಿನಿ ಕೊಟ್ಟ ಉತ್ತರ
ಚೆನ್ನೈ , ಗುರುವಾರ, 23 ಮಾರ್ಚ್ 2017 (10:48 IST)
ಜಯಲಲಿತಾ ನಿಧನದಿಂದ ತೆರವಾಗಿದ್ದ ಚೆನ್ನೈನ ಆರ್.ಕೆ. ನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಗಂಗೈ ಅಮರನ್ ಇತ್ತೀಚೆಗೆ ಸೂಪರ್ ಸ್ಟಾರ್ ರಜಿನಿಕಾಂತ್ ಅವರನ್ನ ಭೇಟಿ ಮಾಡಿದ್ದರು. ಸಂಗೀತ ನಿರ್ದೇಶಕರಾಗಿರುವ ಗಂಗೈ ಅಮರನ್ ಅದೇ ಸಲುಗೆಯಲ್ಲಿ ರಜಿನಿಕಾಂತ್ ಮನೆಗೆ ಭೇಟಿ ನೀಡಿದ್ದರು. ಆದರೆ, ಈ ಭೇಟಿ ಬಳಿಕ ರಜಿನಿ ಬಿಜೆಪಿಯನ್ನ ಬೆಂಬಲಿಸುತ್ತಾರೆ ಎಂಬ ಸುದ್ದಿ ಹರಡಿತ್ತು.

ಈ ಕುರಿತಂತೆ ಸ್ವತಃ ರಜಿನಿಕಾಂತ್ ಉತ್ತರ ಕೊಟ್ಟಿದ್ದಾರೆ. ಮುಂಬರುವ ಉಪಚುನಾವಣೆಯಲ್ಲಿ ಯಾವುದೇ ಪಕ್ಷದ ಅಭ್ಯರ್ಥಿಯನ್ನ ಬೆಂಬಲಿಸುವುದಿಲ್ಲ ಎಂದು ರಜಿನಿಕಾಂತ್ ಟ್ವೀಟ್ ಮಾಡಿದ್ದಾರೆ. ಈ ಮೂಲಕ ಬಿಜೆಪಿ ಸೇರಲಿದ್ದಾರೆ ಎಂಬ ಊಹಾಪೋಹಕ್ಕೂ ತೆರೆ ಎಳೆದಿದ್ದಾರೆ.

ಖ್ಯಾತ ಸಂಗೀತ ನಿರ್ದೇಶಕ ಇಳಯರಾಜಾ ಅವರ ಕಿರಿಯ ಸಹೋರರಾಗಿರುವ ಗಂಗೈ ಅಮರನ್, ಅಣ್ಣಾ ಡಿಎಂಕೆಯ ಉಪ ಕಾರ್ಯದರ್ಶಿ ಟಿಟಿವಿ ದಿನಕರನ್ ಮತ್ತು ಓ ಪನ್ನೀರ್ ಸೆಲ್ಂ ಕ್ಯಾಂಪ್`ನ ಬಂಡಾಯ ಅಭ್ಯರ್ಥಿ ಇ. ಮಧುಸೂದನ್ ಅವರಿಂದ ಪ್ರಬಲ ಪೈಪೋಟಿ ಎದುರಿಸುತ್ತಿದ್ದಾರೆ.

ಜಯಲಲಿತಾ ಅಣ್ಣನ ಪುತ್ರಿ ದೀಪಾ ಜಯಕುಮಾರ್ ಮತ್ತು ಡಿಎಂಕೆಯ ನಾಮ್ ತಮೀಜರ್ ಸಹ ಸ್ಪರ್ಧಾಕಣದಲ್ಲಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಂಡ್ಯದ ಮುಸ್ಲಿಂ ವಿದ್ಯಾರ್ಥಿನಿಯ ಓದಿಗೆ ಸಹಾಯ ಮಾಡಿದ ಪ್ರಧಾನಿ ಮೋದಿ