Publish Date: Thu, 23 Mar 2017 (10:40 IST)
Updated Date: Thu, 23 Mar 2017 (10:42 IST)
ನವದೆಹಲಿ: ಪ್ರಧಾನಿ ಮೋದಿ ಆಗಾಗ ಕಷ್ಟದಲ್ಲಿರುವ ಜನ ಸಾಮಾನ್ಯರಿಗೆ ಸಹಾಯ ಮಾಡಿ ಸುದ್ದಿಯಾಗುತ್ತಾರೆ. ಮತ್ತೊಮ್ಮೆ ಅಂತಹದ್ದೇ ಕೆಲಸ ಮಾಡಿರುವ ಪ್ರಧಾನಿ ಮೋದಿ, ಮುಸ್ಲಿಂ ವಿದ್ಯಾರ್ಥಿನಿಯೊಬ್ಬಳ ವಿದ್ಯಾಭ್ಯಾಸಕ್ಕೆ ನೆರವಾಗಿದ್ದಾರೆ.
ಮಂಡ್ಯ ಜಿಲ್ಲೆಯ ಎಂಬಿಎ ವಿದ್ಯಾರ್ಥಿನಿ ಬಿ ಬಿ ಸಾರಾ ಕಾಲೇಜು ಶುಲ್ಕ ಕಟ್ಟಲು ಕಷ್ಟಪಡುತ್ತಿದ್ದರು. ಯಾವುದೇ ಬ್ಯಾಂಕ್ ನಲ್ಲೂ ಅವರಿಗೆ ಸಾಲ ಸಿಗಲಿಲ್ಲ. ತನ್ನ ಅಸಹಾಯಕತೆಯನ್ನು ಸಾರಾ ನೇರವಾಗಿ ಪ್ರಧಾನಿ ಮೋದಿಗೆ ಪತ್ರ ಬರೆದು ತಿಳಿಸಿದ್ದಾಳೆ.
ಇದಕ್ಕೆ ಕೇವಲ 10 ದಿನಗಳೊಳಗೆ ಪ್ರತಿಕ್ರಿಯಿಸಿದ ಪ್ರಧಾನಿ ಕಚೇರಿ, ಮೋದಿ ಸಹಿ ಸಮೇತ ಇರುವ ಪತ್ರವೊಂದನ್ನು ಕಳುಹಿಸಿದ್ದು, ಆಕೆಗೆ ವಿದ್ಯಾಭ್ಯಾಸ ಸಾಲ ಒದಗಿಸಲು ಬ್ಯಾಂಕ್ ಗಳಿಗೆ ಸೂಚನೆ ನೀಡಿದ್ದಾರೆ. ಆದರೂ ಮೋದಿ ಪತ್ರವನ್ನು ನೋಡಿಯೂ ಕೆಲವು ಬ್ಯಾಂಕ್ ಗಳು ಸಾಲ ಕೊಡಲು ಒಪ್ಪಲಿಲ್ಲ. ಕೊನೆಗೆ ವಿಜಯಾ ಬ್ಯಾಂಕ್ ನಿಂದ ಸಾಲ ಸಿಕ್ಕಿ ಸಾರಾ ಶುಲ್ಕ ಕಟ್ಟಲು ಸಾಧ್ಯವಾಯಿತು.
ಇದಕ್ಕಾಗಿ ಆಕೆ ಪ್ರಧಾನಿ ಮೋದಿಗೆ ಕೃತಜ್ಞತೆ ಸಲ್ಲಿಸಿದ್ದಾಳೆ. ಪ್ರಧಾನಿ ಇಷ್ಟು ಬೇಗ ನನ್ನ ಸಮಸ್ಯೆಗೆ ಸ್ಪಂದಿಸುತ್ತಾರೆ ಎಂದು ಅಂದುಕೊಂಡಿರಲಿಲ್ಲ ಎಂದು ಧನ್ಯವಾದ ಸಲ್ಲಿಸಿದ್ದಾಳೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ