Select Your Language

Notifications

webdunia
webdunia
webdunia
webdunia

ಪ್ರಾಣದ ಹಂಗು ತೊರೆದು ಪೊಲೀಸ್ ಅಧಿಕಾರಿಯನ್ನು ರಕ್ಷಿಸಲು ಮುಂದಾದ ಸಂಸದ!

ಪ್ರಾಣದ ಹಂಗು ತೊರೆದು ಪೊಲೀಸ್ ಅಧಿಕಾರಿಯನ್ನು ರಕ್ಷಿಸಲು ಮುಂದಾದ ಸಂಸದ!
London , ಗುರುವಾರ, 23 ಮಾರ್ಚ್ 2017 (09:56 IST)
ಲಂಡನ್: ಬ್ರಿಟನ್ ಸಂಸತ್ತಿನ ಬಳಿ ಉಗ್ರನೊಬ್ಬ ದಾಳಿ ನಡೆಸಿದ್ದು, ನಾಲ್ವರು ಸಾವನ್ನಪ್ಪಿದ್ದರೆ, ಹಲವರಿಗೆ ಗಾಯವಾಗಿದೆ. ಆದರೆ ಈ ದಾಳಿ ಸಂದರ್ಭದಲ್ಲಿ ಗಂಭೀರವಾಗಿ ಗಾಯಗೊಂಡ ಪೊಲೀಸ್ ಅಧಿಕಾರಿಯೊಬ್ಬನನ್ನು ಪ್ರಾಣದ ಹಂಗು ತೊರೆದು ಸಂಸದರೊಬ್ಬರು ರಕ್ಷಿಸಿದ ಘಟನೆ ನಡೆದಿದೆ.

 

ತೊಬಿಯಾಸ್ ಎಲ್ ವುಡ್ ಎಂಬ ಧೈರ್ಯ ಶಾಲಿ ಸಂಸದ, ತಮ್ಮ ಸಹೋದ್ಯೋಗಿಗಳು ಬೆಚ್ಚಗೆ ಭದ್ರತಾ ಪಡೆಗಳ ಕಾವಲಿನಲ್ಲಿ ಸುರಕ್ಷಿತವಾಗಿದ್ದರೆ, ತಾವು ಮಾತ್ರ ಧೈರ್ಯದಿಂದ ಮುನ್ನುಗ್ಗಿ ಗಂಭೀರವಾಗಿ ಗಾಯಗೊಂದು ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದ ಪೊಲೀಸ್ ಅಧಿಕಾರಿಯನ್ನು ರಕ್ಷಿಸಿದ್ದಾರೆ.

 
ಆದರೆ ದುರಾದೃಷ್ಟವಶಾತ್, ಆ ಪೊಲೀಸ್ ಅಧಿಕಾರಿ ಬದುಕುಳಿಯಲಿಲ್ಲ. ಇದರಿಂದ ತೊಬಿಯಾಸ್ ತೀವ್ರ ದುಃಖಿತರಾಗಿದ್ದಾರಂತೆ. ಆದರೂ, ಮಿಲಿಟರಿ ತರಬೇತಿ ಪಡೆದಿದ್ದ ಈ ಸಂಸದನ ಸಾಹಸದ ಬಗ್ಗೆ ಬ್ರಿಟನ್ ನಾದ್ಯಂತ ಮೆಚ್ಚುಗೆ ವ್ಯಕ್ತವಾಗಿದೆ.

 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

Share this Story:

Follow Webdunia kannada

ಮುಂದಿನ ಸುದ್ದಿ

ಉಗ್ರನಿಂದ ಇರಿತಕ್ಕೊಳಗಾಗಿದ್ದ ಪೊಲೀಸ್ ಅಧಿಕಾರಿಯನ್ನ ಉಳಿಸಲು ಅವಿರತ ಪ್ರಯತ್ನ ನಡೆಸಿದ ಸಂಸದ