Select Your Language

Notifications

webdunia
webdunia
webdunia
webdunia

2024 ಮಾತ್ರವಲ್ಲ, 2029 ಕ್ಕೂ ಮೋದಿಯೇ ಪ್ರಧಾನಿ ಎಂದು ಸ್ಪಷ್ಟನೆ ಕೊಟ್ಟ ರಾಜನಾಥ್ ಸಿಂಗ್

Rajnath Singh

Krishnaveni K

ನವದೆಹಲಿ , ಬುಧವಾರ, 22 ಮೇ 2024 (11:04 IST)
Photo Courtesy: Twitter
ನವದೆಹಲಿ: ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಎನ್ ಡಿಎ ಮೈತ್ರಿಕೂಟ ಮತ್ತೆ ಅಧಿಕಾರಕ್ಕೆ ಬಂದರೆ ಪ್ರಧಾನಿಯಾಗಿ ಮೋದಿ ಇರಲ್ಲ ಎಂಬ ವಿಪಕ್ಷಗಳ ಟೀಕೆಗಳಿಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ತಿರುಗೇಟು ನೀಡಿದ್ದಾರೆ.

ಬಿಜೆಪಿಯಲ್ಲಿ 75 ವರ್ಷ ದಾಟಿದವರಿಗೆ ಅಧಿಕಾರ ಕೊಡಲ್ಲ ಎಂಬ ನಿಯಮವಿದೆ. ಇದನ್ನು ಸ್ವತಃ ಪ್ರಧಾನಿ ಮೋದಿಯೇ ತಂದಿದ್ದು. ಹೀಗಾಗಿ ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ಬಂದರೆ ಮೋದಿ ಪ್ರಧಾನಿಯಾಗಲ್ಲ, ಬದಲಿಗೆ ಅಮಿತ್ ಶಾ ಪ್ರಧಾನಿಯಾಗುತ್ತಾರೆ. ಹೀಗಾಗಿ ಮತದಾರರು ಯೋಚಿಸಿ ಮತ ಹಾಕಿ ಎಂದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಟಾಂಗ್ ಕೊಟ್ಟಿದ್ದರು.

ಇದೀಗ ವಿಪಕ್ಷಗಳ ಟೀಕೆಗೆ ತಿರುಗೇಟು ಕೊಟ್ಟಿರುವ ರಕ್ಷಣಾ ಸಚಿವ ರಾಜನಾಥ್ ಸಿಂಗ್, ‘2024 ಮಾತ್ರವಲ್ಲ, 2029 ರಲ್ಲಿ ಮತ್ತೆ ಅಧಿಕಾರಕ್ಕೆ ಬಂದಾಗಲೂ ಮೋದಿಯೇ ಪ್ರಧಾನಿಯಾಗುತ್ತಾರೆ’ ಎಂದು ಹೇಳಿದ್ದಾರೆ. ಆಂಗ್ಲ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಅವರು ಈ ಹೇಳಿಕೆ ನೀಡಿದ್ದಾರೆ.

ಮೋದಿ ಪ್ರಧಾನಿಯಾದರೆ ಭಾರತ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಲಿದೆ. ಅವರು ಮತ್ತೆ ಪ್ರಧಾನಿಯಾಗಬೇಕೆಂಬುದು ಜನರ ಆಶಯ.  75 ಮೇಲ್ಪಟ್ಟವರು ಚುನಾವಣೆಗೆ ಸ್ಪರ್ಧಿಸಬಾರದು ಎಂದು ನಿರ್ಧಾರ ಮಾಡಿಕೊಂಡಿಲ್ಲ. ಒಂದು ವೇಳೆ ಅದು ನಿಯಮವಾಗಿದ್ದರೆ ಪಕ್ಷದ ನಿಯಮಗಳಲ್ಲಿ ಉಲ್ಲೇಖಿಸಲಾಗುತ್ತಿತ್ತು ಎಂದು ಅವರು ಹೇಳಿದ್ದಾರೆ. ಅಂತಹ ನಿಯಮವಿದ್ದಿದ್ದರೆ ಎಲ್ ಕೆ ಅಡ್ವಾಣಿಯವರು 2014 ರ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರಲಿಲ್ಲ ಎಂದು ಅವರು ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಬೆಂಗಳೂರಿನಲ್ಲಿ ಹೆಚ್ಚಾಗ್ತಿದೆ ವೆಸ್ಟ್ ನೈಲ್, ಡೆಂಗ್ಯೂ ಜ್ವರ, ಏನಿದರ ಲಕ್ಷಣ