ಹನಿಮೂನ್ ಹಂತಕಿ ಸೋನಂ ರಘುವಂಶಿಯ ಮತ್ತೊಂದು ಸೀಕ್ರೆಟ್ ಬಯಲು

Krishnaveni K
ಗುರುವಾರ, 19 ಜೂನ್ 2025 (11:21 IST)
ಇಂಧೋರ್: ಹನಿಮೂನ್ ಹಂತಕಿ ಸೋನಂ ರಘುವಂಶಿ ಮದುವೆಗೆ ಮುನ್ನ ಪ್ರಿಯಕರನಿಗೆ ರಾಜ ರಘವಂಶಿ ಜೊತೆಗಿನ ಮದುವೆಗೆ ಮುನ್ನ 100 ಕ್ಕೂ ಹೆಚ್ಚು ಬಾರಿ ಕರೆ ಮಾಡಿದ್ದಳು ಎಂಬ ವಿಚಾರ ಬೆಳಕಿಗೆ ಬಂದಿದೆ.

ಇಂಧೋರ್ ನ ರಾಜ ರಘುವಂಶಿ ಕೊಲೆ ಪ್ರಕರಣದ ತನಿಖೆ ಮಾಡುತ್ತಿರುವ ಪೊಲೀಸರಿಗೆ ಹೊಸ ಹೊಸ ವಿಚಾರಗಳು ಬಯಲಿಗೆ ಬರುತ್ತಿವೆ. ರಾಜ ರಘುವಂಶಿಯನ್ನು ಹನಿಮೂನ್ ಗೆಂದು ಮೇಘಾಲಯಕ್ಕೆ ಕರೆದುಕೊಂಡು ಹೋಗಿ ಪ್ರಿಯಕರ ರಾಜ್ ಕುಶ್ವಾಹ ಜೊತೆ ಸೇರಿಕೊಂಡು ಕೊಲೆ ಮಾಡಿಸಿದ್ದಳು.

ಈಗ ರಾಜ್ ಕುಶ್ವಾಹ, ಸೋನಂ ಸೇರಿದಂತೆ ಎಲ್ಲಾ ಆರೋಪಿಗಳನ್ನೂ ಬಂಧಿಸಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಸೋನಂ ತನ್ನ ಫೋನ್ ನಲ್ಲಿ ರಾಜ್ ಕುಶ್ವಾಹ ಹೆಸರನ್ನು ಸಂಜಯ್ ವರ್ಮ ಎಂದು ಸೇವ್ ಮಾಡಿಕೊಂಡಿದ್ದಳು. ಈ ನಂಬರ್ ಗೆ ಮದುವೆಗೆ ಮುನ್ನ ನೂರಕ್ಕೂ ಹೆಚ್ಚು ಬಾರಿ ಕರೆ ಮಾಡಿದ್ದಳು. ಮದುವೆ ಬಳಿಕವೂ ಫೋನ್ ಕರೆಗಳು ಮುಂದುವರಿದಿದ್ದವು ಎಂದು ತಿಳಿದುಬಂದಿದೆ.

ಕೊಲೆ ನಡೆದ ದಿನವೂ ರಾಜ್ ಕುಶ್ವಾಹ ಅನುಮಾನ ಬರಬಹುದು ಎಂಬ ಕಾರಣಕ್ಕೆ ಮೇಘಾಲಯಕ್ಕೆ ಖುದ್ದಾಗಿ ತೆರಳಿರಲಿಲ್ಲ. ಆದರೆ ಕೃತ್ಯದ ಮಾಸ್ಟರ್ ಮೈಂಡ್ ಆತನೇ ಆಗಿದ್ದು ತನ್ನ ಸಹಚರರ ಮೂಲಕ ಕೆಲಸ ಮಾಡಿಸಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸಿದ್ದರಾಮಯ್ಯಗೆ ಬಂತು ಸುಪ್ರೀಂ ನೋಟಿಸ್, ಯಾವಾ ಪ್ರಕರಣದಲ್ಲಿ ಗೊತ್ತಾ

ಮುಸ್ಲಿಮರನ್ನು ಖುಷಿಪಡಿಸಲು ಕಾಂಗ್ರೆಸ್ ವಂದೇಮಾತರಂನ್ನು ತುಂಡು ಮಾಡಿತು: ಪ್ರಧಾನಿ ಮೋದಿ

ಡಿಕೆ ಶಿವಕುಮಾರ್ ಸಿಎಂ ಆಗುವ ಬಗ್ಗೆ ಸಿದ್ದರಾಮಯ್ಯ ಪುತ್ರ ಯತೀಂದ್ರ ಸ್ಪೋಟಕ ಹೇಳಿಕೆ

Gold Price: ಚಿನ್ನದ ದರ ಇಂದು ಎಷ್ಟಾಗಿದೆ ನೋಡಿ

Arecanut Price: ಇಂದು ಅಡಿಕೆ ರೇಟ್ ಎಷ್ಟು ನೋಡಿ

ಮುಂದಿನ ಸುದ್ದಿ
Show comments