Raja Raguvamshi murder: ಗಂಡನನ್ನು ಕೊಲೆ ಬಗ್ಗೆ ಶಾಕಿಂಗ್ ವಿಚಾರ ಬಾಯ್ಬಿಟ್ಟ ಸೋನಮ್: ತಂದೆ ಫುಲ್ ಸಪೋರ್ಟ್

Krishnaveni K
ಮಂಗಳವಾರ, 10 ಜೂನ್ 2025 (10:21 IST)
ಇಂಧೋರ್: ಹನಿಮೂನ್ ಗೆಂದು ಗಂಡನನ್ನು ಕರೆದುಕೊಂಡು ಹೋಗಿ ಕೊಲೆ ಮಾಡಿದ ಪತ್ನಿ ಸೋನಮ್ ಪೊಲೀಸರ ಮುಂದೆ ಶಾಕಿಂಗ್ ವಿಚಾರಗಳನ್ನು ಹಂಚಿಕೊಂಡಿದ್ದಾಳೆ. ವಿಶೇಷವೆಂದರೆ ಆಕೆಯ ತಂದೆಯೇ ಮಗಳ ಬೆಂಬಲಕ್ಕೆ ನಿಂತಿದ್ದಾರೆ.

ಇಂಧೋರ್ ನ ರಾಜ ರಘುವಂಶಿ ಕೊಲೆ ಪ್ರಕರಣ ಈಗ ದೇಶದಾದ್ಯಂತ ಭಾರೀ ಸದ್ದು ಮಾಡುತ್ತಿದೆ. ಮೇ 10 ರಂದು ಮದುವೆಯಾಗಿದ್ದ ದಂಪತಿ ಬಳಿಕ ಹನಿಮೂನ್ ಗೆಂದು ತೆರಳಿದ್ದರು. ಮೇ 23 ರಿಂದ ಪತಿ ರಘುವಂಶಿ ನಾಪತ್ತೆಯಾಗಿದ್ದ. ಜೂನ್ 2 ರಂದು ಆತನ ಮೃತದೇಹ ಪತ್ತೆಯಾಗಿತ್ತು. ಇದಾದ ಬಳಿಕ ಪತ್ನಿಯೂ ನಾಪತ್ತೆಯಾಗಿದ್ದಳು. ಇದೀಗ ಪತ್ನಿ ಸೋನಮ್ ನನ್ನು ಗಾಝಿಯಾಪುರದ ಢಾಬಾ ಒಂದರಿಂದ ಅರೆಸ್ಟ್ ಮಾಡಲಾಗಿತ್ತು.

ಆಕೆಯೇ ತನ್ನ ಪ್ರಿಯಕರ ಮತ್ತು ಸ್ನೇಹಿತರ ಜೊತೆ ಸೇರಿಕೊಂಡು ಗಂಡನನ್ನು ಕೊಲೆ ಮಾಡಿದ್ದಾಳೆ ಎಂದು ಆರೋಪಿಸಲಾಗಿದೆ. ಆದರೆ ವಿಚಾರಣೆ ವೇಳೆ ಸೋನಮ್ ನಾನು ಗಂಡನ ಕೊಲೆ ಮಾಡಿಲ್ಲ, ಆದರೆ ಕಿಡ್ನ್ಯಾಪ್ ಮಾಡಿದ್ದೆ ಎಂದಿದ್ದಾಳೆ. ವಿಶೇಷವೆಂದರೆ ಆಕೆಯ ತಂದೆಯೂ ಆಕೆಯ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ನನ್ನ ಮಗಳು ಕೊಲೆ ಮಾಡುವಂತವಳಲ್ಲ. ಢಾಬಾದಿಂದ ತನ್ನ ಸಹೋದರನಿಗೂ ಕರೆ ಮಾಡಿದ್ದಳು ಎಂದೆಲ್ಲಾ ಹೇಳಿದ್ದು ಮಗಳ ಬೆಂಬಲಕ್ಕೆ ನಿಂತಿದ್ದಾರೆ.

ಸದ್ಯಕ್ಕೆ ಆಕೆಯನ್ನು ಚಿಕಿತ್ಸೆಗಾಗಿ ಸದರ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇಲ್ಲಿಯೂ ಸಿಬ್ಬಂದಿಗಳ ಜೊತೆ ನಾನು ಕೊಲೆ ಮಾಡಿಲ್ಲ ಎನ್ನುತ್ತಲೇ ಇದ್ದಾಳೆ ಎಂದು ತಿಳಿದುಬಂದಿದೆ. ನಾನು ಕಿಡ್ನ್ಯಾಪ್ ಮಾಡಿದ್ದು ನಿಜ, ಆದರೆ ಯಾರನ್ನೂ ಕೊಲೆ ಮಾಡಿಲ್ಲ ಎಂದಿದ್ದಾಳಂತೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Video: ದೀಪಾವಳಿ ಬೋನಸ್ ಬದಲು ಸೋನ್ ಪಾಪ್ಡಿ ಕೊಟ್ಟ ಬಾಸ್: ನೌಕರರು ಮಾಡಿದ್ದೇನು

Video: ಇರುಮುಡಿ ಹೊತ್ತು ಶಬರಿಮಲೆ 18 ಮೆಟ್ಟಿಲು ಹತ್ತಿದ ರಾಷ್ಟ್ರಪತಿ ದ್ರೌಪದಿ ಮುರ್ಮು: ಹೊಸ ದಾಖಲೆ

ಆರ್ ಎಸ್ಎಸ್ ನಲ್ಲಿದ್ದ ಅಶೋಕ್ ರೈ ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರಿದ್ದು ಯಾಕೆ: ಅವರೇ ಹೇಳಿದ್ದು ಹೀಗೆ

ಅಪ್ಪ ಅನಂತ್ ಕುಮಾರ್ ಸುದ್ದಿಗೆ ಬಂದಿದ್ದಕ್ಕೆ ಪ್ರಿಯಾಂಕ್ ಖರ್ಗೆಗೆ ಬೆಂಡೆತ್ತಿದ ಪುತ್ರಿ ಐಶ್ವರ್ಯಾ

ಬಾಡೂಟ ತಿಂದ ಬಳಿಕ ನಿಮ್ಮ ಡಯಟ್ ಹೀಗಿರಬೇಕು

ಮುಂದಿನ ಸುದ್ದಿ
Show comments