Webdunia - Bharat's app for daily news and videos

Install App

Siddaramaiah: ಚಿನ್ನಸ್ವಾಮಿ ದುರಂತದ ಬಗ್ಗೆ ಜೊತೆಯಲ್ಲಿದ್ದವರೂ ಹೇಳಲೇ ಇಲ್ವಲ್ಲಪ್ಪಾ.. ಸಿದ್ದರಾಮಯ್ಯ ಅಳಲು

Krishnaveni K
ಮಂಗಳವಾರ, 10 ಜೂನ್ 2025 (09:47 IST)
ಬೆಂಗಳೂರು: ಚಿನ್ನಸ್ವಾಮಿಯಲ್ಲಿ ಆರ್ ಸಿಬಿ ಸಂಭ್ರಮಾಚರಣೆ ವೇಳೆ ನಡೆದ ದುರಂತದ ಬಗ್ಗೆ ಜೊತೆಯಲ್ಲಿದ್ದವರೂ ನನಗೆ ಕೂಡಲೇ ಮಾಹಿತಿ ನೀಡಲಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಅಳಲು ತೋಡಿಕೊಂಡಿದ್ದಾರೆ.

ಚಿನ್ನಸ್ವಾಮಿ ಕಾಲ್ತುಳಿತ ಪ್ರಕರಣದಿಂದ ಸರ್ಕಾರಕ್ಕೆ ಮುಜುಗರವಾಗಿದೆ. ಇದಕ್ಕೆ ಹೈಕಮಾಂಡ್ ಕೂಡಾ ಸಿಟ್ಟಾಗಿದೆ. ಹೀಗಾಗಿ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು ತಕ್ಷಣವೇ ದೆಹಲಿಗೆ ಬರುವಂತೆ ಬುಲಾವ್ ನೀಡಿದೆ. ಅದರಂತೆ ಇಂದು ಸಿಎಂ ಮತ್ತು ಡಿಸಿಎಂ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಲಿದ್ದಾರೆ.

ಕಾಲ್ತುಳಿತ ಪ್ರಕರಣದ ನಂತರ ಸಿಎಂ ಸಿದ್ದರಾಮಯ್ಯ ಏನೇ ಹೇಳಿಕೆ ನೀಡಿದರೂ ವಿವಾದವಾಗುತ್ತಿದೆ. ಕಾಲ್ತುಳಿತವಾಗಿದ್ದು 3 ಗಂಟೆ ಸುಮಾರಿಗೆ. ಆದರೆ ನನಗೆ ಗೊತ್ತಾಗಿದ್ದು 5.45 ಕ್ಕೆ ಎಂದು ಸಿಎಂ ಹೇಳಿಕೆ ನೀಡಿದ್ದರು.  ಒಬ್ಬ ಸಿಎಂ ಆಗಿ ಇಷ್ಟು ದೊಡ್ಡ ವಿಚಾರ ತಮ್ಮ ಎದುರೇ ಆಗುತ್ತಿದ್ದರೂ ಗೊತ್ತಾಗಲಿಲ್ಲವೇ ಎಂದು ಹಲವರು ಟೀಕೆ ಮಾಡಿದ್ದಾರೆ.

ಇದರ ಬೆನ್ನಲ್ಲೇ ನಿನ್ನೆ ಸಹೋದ್ಯೋಗಿಗಳೊಂದಿಗಿನ ಸಭೆಯಲ್ಲೂ ಸಿಎಂ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ರಾಜಕೀಯ ಕಾರ್ಯದರ್ಶಿ ಗೋವಿಂದ ರಾಜು ತನ್ನ ಜೊತೆಗೆ ಇಡೀ ದಿನವಿದ್ದರೂ ತನಗೆ ದುರ್ಘಟನೆ ಬಗ್ಗೆ ಮಾಹಿತಿ ನೀಡಲಿಲ್ಲ. ಕಮಿಷನರ್ ದಯಾನಂದ್ ಕೂಡಾ ನನಗೆ ಕೂಡಲೇ ಮಾಹಿತಿ ನೀಡಲಿಲ್ಲ ಎಂದು ಸಿಎಂ ಅಳಲು ತೋಡಿಕೊಂಡಿದ್ದಾರೆ ಎನ್ನಲಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಮತಗಳವಿನ ಬಗ್ಗೆ ಆಘಾತಕಾರಿ ವರದಿಗಳು ಬಹಿರಂಗಗೊಳ್ಳಲಿವೆ: ಕೆ ಸಿ ವೇಣುಗೋಪಾಲ್

ಪ್ರಜ್ವಲ್ ರೇವಣ್ಣಗೆ ಇಂದು ಬಿಗ್ ಡೇ: ಜೈಲಲ್ಲೇ ಢವ ಢವ

Karnataka Weather: ಈ ಜಿಲ್ಲೆಗಳನ್ನು ಬಿಟ್ಟು ಉಳಿದೆಡೆ ಇಂದು ಮಳೆಗೆ ಬಿಡುವು

ಅಪ್ತಾಪ್ತೆ ಮೇಲೆ ನಿರಂತರ ರೇಪ್ ಮಾಡಿ, ಗರ್ಭಪಾತ: ಪುತ್ತೂರಿನ 7 ವರ್ಷಗಳ ಹಿಂದಿನ ಪ್ರಕರಣಕ್ಕೆ ತೀರ್ಪು ಪ್ರಕಟ

ಮತಗಳ್ಳತನ: ರಾಹುಲ್ ನೇತೃತ್ವದಲ್ಲಿ ಆ.5 ರಂದು ಪ್ರತಿಭಟನೆ, ಡಿಕೆ ಶಿವಕುಮಾರ್

ಮುಂದಿನ ಸುದ್ದಿ
Show comments