ಹೈಡ್ರೋಜನ್ ಎಂಜಿನ್ ಪ್ರಯೋಗಕ್ಕೆ ರೈಲ್ವೆ ನಿರ್ಧಾರ!

Webdunia
ಭಾನುವಾರ, 8 ಆಗಸ್ಟ್ 2021 (13:47 IST)
ನವದೆಹಲಿ(ಆ.08): ಭಾರತೀಯ ರೈಲ್ವೆ ಇದೇ ಮೊದಲ ಬಾರಿ ಹೈಡ್ರೋಜನ್ ಚಾಲಿತ ಎಂಜಿನ್ ಪ್ರಯೋಗಕ್ಕೆ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಅದು ಹಾಲಿ ಇರುವ ಡೀಸೆಲ್ ಎಂಜಿನ್ ಅನ್ನು ಹೈಡ್ರೋಜನ್ ಚಾಲಿತ ಎಂಜಿನ್ ಆಗಿ ಬದಲಿಸಲು ಬಿಡ್ಡಿಂಗ್ ಆಹ್ವಾನಿಸಿದೆ.

ಹರಾರಯಣದ ಸೋನಿಪತ್-ಜಿಂದ್ ಸೆಕ್ಷನ್ನ 89 ಕಿ.ಮೀ. ಉದ್ದದ ಮಾರ್ಗದ ಡೀಸೆಲ್ ಚಾಲಿತ ಡೆಮು ರೈಲನ್ನು ಅದು ಹೈಡ್ರೋಜನ್ ಎಂಜಿನ್ ಆಗಿ ಬದಲಿಸಲು ನಿರ್ಧರಿಸಿದೆ. ಹೀಗೆ ಪರಿವರ್ತಿಸುವುದರಿಂದ ವಾರ್ಷಿಕ 2.3 ಕೋಟಿ ರು.ನಷ್ಟುಇಂಧನ ಉಳಿತಾಯ ಆಗಲಿದೆ. ಅಷ್ಟೇ ಅಲ್ಲ, ವಾರ್ಷಿಕ 11.12 ಕಿಲೋ ಟನ್ ಇಂಗಾಲ ಹೊರಸೂಸುವಿಕೆ ನಿಲ್ಲಲಿದೆ. ಈ ರೀತಿ ಹೈಡ್ರೋಜನ್ ತಂತ್ರಜ್ಞಾನ ಪರಿಸರ ಸ್ನೇಹಿ ಹಾಗೂ ಮಿತವ್ಯಯಿ ಆಗಲಿದೆ ಎಂದು ರೈಲ್ವೆ ಪ್ರಕಟಣೆ ತಿಳಿಸಿದೆ.
ಬಿಡ್ಡಿಂಗ್ ಸೆ.21ರಂದು ಆರಂಭವಾಗಲಿದೆ ಹಾಗೂ ಅ.5ಕ್ಕೆ ಅಂತ್ಯಗೊಳ್ಳಲಿದೆ. ಮೊದಲು ಪ್ರಾಯೋಗಿಕವಾಗಿ 2 ಡೆಮು ರೈಲುಗಳಿಗೆ ಹೈಡ್ರೋಜನ್ ತಂತ್ರಜ್ಞಾನ ಅಳವಡಿಸಲಾಗುತ್ತದೆ. ನಂತರ ಉಳಿದ ರೈಲುಗಳಿಗೆ ವಿಸ್ತರಿಸಲಾಗುತ್ತದೆ ಎಂದಿದೆ.
ಈಗಿನ ಮಟ್ಟಿಗೆ ಪೋಲೆಂಡ್ ಹಾಗೂ ಜರ್ಮನಿ ಮಾತ್ರ ಈ ತಂತ್ರಜ್ಞಾನದ ಪ್ರಯೋಗ ನಡೆಸಿವೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸುಪ್ರೀಂಕೋರ್ಟ್‌ನ 53ನೇ ಮುಖ್ಯ ನ್ಯಾಯಮೂರ್ತಿಯಾಗಿ ಸೂರ್ಯಕಾಂತ್‌ ನಾಳೆ ಪ್ರಮಾಣ ಸ್ವೀಕಾರ

ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಮತ್ತಷ್ಟು ಕಳಪೆ ಮಟ್ಟಕ್ಕೆ ಇಳಿದ ವಾಯು ಗುಣಮಟ್ಟ

ಕರೂರು ಕಾಲ್ತುಳಿತದ ಬಳಿಕ ಬಿಗಿ ಭದ್ರತೆಯಲ್ಲಿ ಚುನಾವಣಾ ರ‍್ಯಾಲಿ ಶುರು ಮಾಡಿದ ನಟ ವಿಜಯ್‌

ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಕುರ್ಚಿ ಫೈಟ್ ಗೆ ನಾನೂ ಇದ್ದೀನಿ ಎಂದು ಎಂಟ್ರಿ ಕೊಟ್ಟವರು ಯಾರು

ಪ್ರಧಾನಿ ನರೇಂದ್ರ ಮೋದಿ ಉಡುಪಿಗೆ ಭೇಟಿಗೆ ದಿನಗಣನೆ: ರಾಜ್ಯ ಪ್ರವಾಸದ ಕಂಪ್ಲೀಟ್‌ ವೇಳಾಪಟ್ಟಿ ಇಲ್ಲಿದೆ

ಮುಂದಿನ ಸುದ್ದಿ
Show comments