Select Your Language

Notifications

webdunia
webdunia
webdunia
webdunia

ರಾಹುಲ್ ಗಾಂಧಿ ಸಲಿಂಗಕಾಮಿ ಎಂಬುದಕ್ಕೆ ದಾಖಲೆಯಿದೆ ಎಂದವರು ಯಾರು ಗೊತ್ತೇ?!

ರಾಹುಲ್ ಗಾಂಧಿ ಸಲಿಂಗಕಾಮಿ ಎಂಬುದಕ್ಕೆ ದಾಖಲೆಯಿದೆ ಎಂದವರು ಯಾರು ಗೊತ್ತೇ?!
ನವದೆಹಲಿ , ಶುಕ್ರವಾರ, 3 ಜನವರಿ 2020 (16:02 IST)
ನವದೆಹಲಿ: ನಾಥೂರಾಮ್ ಗೋಡ್ಸೆ ಮತ್ತು ವೀರ ಸವಾರ್ಕರ್ ನಡುವೆ ದೈಹಿಕ ಸಂಬಂಧವಿತ್ತು ಎಂದು ಮಧ್ಯಪ್ರದೇಶದ ಕಾಂಗ್ರೆಸ್ ಸೇವಾ ದಳ ಪುಸ್ತಕವೊಂದರಲ್ಲಿ ಪ್ರಕಟಿಸಿದ್ದಕ್ಕೆ ಪ್ರತಿಯಾಗಿ ಹಿಂದೂ ಮಹಾಸಭಾ ರಾಹುಲ್ ಗಾಂಧಿಯನ್ನು ಸಲಿಂಗಕಾಮಿ ಎಂದಿದೆ.


ಕಾಂಗ್ರೆಸ್ ಸೇವಾ ದಳ ಸವಾರ್ಕರ್ ವಿರುದ್ಧ ಮಾಡಿದ್ದ ಆರೋಪದ ವಿರುದ್ಧ ಕೆಂಡಾಮಂಡಲವಾಗಿರುವ ಹಿಂದೂ ಮಹಾಸಭಾ ರಾಹುಲ್ ಗಾಂಧಿಯೂ ಇಂತಹದ್ದೇ ಸಂಬಂಧ ಹೊಂದಿದ್ದರು ಎಂಬುದಕ್ಕೆ ಪುರಾವೆಯಿದೆ ಎಂದಿದೆ.

ಮಾಧ್ಯಮಗಳ ಮುಂದೆ ಆಕ್ರೋಶ ವ್ಯಕ್ತಪಡಿಸಿರುವ ಹಿಂದೂ ಮಹಾಸಭಾ ಅಧ್ಯಕ್ಷ ಸ್ವಾಮಿ ಚಕ್ರಪಾಣಿ ‘ಮಹಾಸಭಾದ ಅಧ್ಯಕ್ಷರಾಗಿದ್ದ ಸವಾರ್ಕರ್ ಅವರ ವಿರುದ್ಧ ಇಂತಹದ್ದೊಂದು ಹೇಳಿಕೆ ನೀಡಿರುವುದು ಅಕ್ಷಮ್ಯ. ರಾಹುಲ್ ಗಾಂಧಿ ವಿರುದ್ಧವೂ ಇಂತಹದ್ದೇ ವಿಚಾರವನ್ನು ನಾವು ಕೇಳಿದ್ದೇವೆ’ ಎಂದಿದ್ದಾರೆ.

ಕಾಂಗ್ರೆಸ್ ಸೇವಾ ದಳ ಪ್ರಕಟಿಸಿರುವ ಲೇಖನದಲ್ಲಿ ವೀರ ಸವಾರ್ಕರ್ ಬಗ್ಗೆ ಅವಹೇಳನ ಮಾಡಿರುವುದಲ್ಲದೆ, ಅವರ ಜತೆಗಾರ ನಾಥೂರಾಮ್ ಗೋಡ್ಸೆಯಾಗಿದ್ದರು ಎಂದು ಬರೆಯಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮೀನಿಗೆ ಬಲೆಗೆ ಬಿದ್ದು ಜೀವ ಉಳಿಸಿಕೊಂಡ ಭಾರೀ ಗಾತ್ರದ ಹೆಬ್ಬಾವು