ಬೃಹತ್ ಗಾತ್ರದ ಹೆಬ್ಬಾವೊಂದು ಅಂಥ ಸ್ಥಳದಲ್ಲಿತ್ತು. ಕೊನೆಗೂ ಜೀವಸಹಿತ ಬಚಾವ್ ಆಗಿದೆ.
									
										
								
																	
ಬಲೆಗೆ ಸಿಲಿಕಿಕೊಂಡಿದ್ದ ಹೆಬ್ಬಾವು ಒಂದನ್ನು ರಕ್ಷಿಸಿದ್ದಾರೆ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸ್ನೇಕ್ ಮುನ್ನಾ.
ಮಂಡ್ಯದ ಕೋಟಹಳ್ಳಿ ಗ್ರಾಮದ ಕೆರೆಯೊಂದರಲ್ಲಿ ಮೀನು ಹಿಡಿಯುವ ಸಲುವಾಗಿ ಕೆರೆಗೆ ಬಲೆ ಬಿಡಲಾಗಿತ್ತು.
									
			
			 
 			
 
 			
					
			        							
								
																	ಆಕಸ್ಮಿಕವಾಗಿ ಹೆಬ್ಬಾವು ಬಲೆಗೆ ಸಿಲುಕಿಕೊಂಡು ಒದ್ದಾಡುತ್ತಿದ್ದನ್ನು ಗಮನಿಸಿದ ಸಾರ್ವಜನಿಕರು, ಕೂಡಲೇ ಅರಣ್ಯ ಇಲಾಖೆಗೆ ವಿಷಯ ತಿಳಿಸಿದರು.
									
										
								
																	ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆಯ ಅಧಿಕಾರಿಗಳು, ಸ್ನೇಕ್ ಮುನ್ನಾ ಸಹಾಯದೊಂದಿಗೆ ಹಾವನ್ನು ರಕ್ಷಿಸಿದ್ರು.  ಕಿಕ್ಕೇರಿ ಪಶುವೈದ್ಯ ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ನೀಡಿಸಿ ಅರಣ್ಯಕ್ಕೆ ಬಿಡಲಾಯಿತು.