Publish Date: Fri, 01 Apr 2022 (10:57 IST)
Updated Date: Fri, 01 Apr 2022 (11:03 IST)
ಕನ್ನಡ ಸಿನಿರಂಗ ಮಾತ್ರವಲ್ಲ ಎಲ್ಲ ಕ್ಷೇತ್ರದಲ್ಲಿಯೂ ತಮ್ಮದೇ ಛಾಪು ಮೂಡಿಸಿ ಎಲ್ಲರನ್ನು ತಮ್ಮತ್ತ ಆಕರ್ಷಿಸಿದ ವ್ಯಕ್ತಿ ಯುವರತ್ನ ಡಾ.ಪುನೀತ್ ರಾಜ್ಕುಮಾರ್.
ಅವರು ಸಾವನ್ನಪ್ಪಿದಾಗಿನಿಂದ ಅವರ ಮನೆಗೆ ಸೆಲೆಬ್ರಿಟಿಗಳು, ರಾಜಕಾರಣಿಗಳು ಭೇಟಿ ಕೊಟ್ಟು ಅಶ್ವಿನಿ ಪುನೀತ್ ರಾಜ್ಕುಮಾರ್ ಅವರಿಗೆ ಸಾಂತ್ವನದ ಮಾತುಗಳನ್ನು ಹೇಳುತ್ತಿದ್ದಾರೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಹ ಪುನೀತ್ ನಿವಾಸಕ್ಕೆ ಭೇಟಿ ಕೊಟ್ಟಿದ್ದು, ಅಶ್ವಿನಿ ಅವರಿಗೆ ಸಾಂತ್ವನದ ಮಾತುಗಳನ್ನು ಹೇಳಿದ್ದಾರೆ.
ಸಿದ್ದಗಂಗಾಮಠದ ನಡೆದಾಡುವ ದೇವರು, ಲಿಂಗೈಕ್ಯರಾಗಿರುವ ಡಾ.ಶಿವಕುಮಾರ ಸ್ವಾಮೀಜಿಗಳ 115ನೇ ಜನ್ಮದಿನೋತ್ಸವದ ಹಿನ್ನೆಲೆ ಗುರುವಾರ ರಾಹುಲ್ ಅವರು ಮಠಕ್ಕೆ ತೆರಳಿ ಗದ್ದುಗೆ ದರ್ಶನ ಪಡೆದರು. ರಾತ್ರಿ ಬೆಂಗಳೂರಿಗೆ ಆಗಮಿಸಿದ ರಾಹುಲ್ ಅವರು ಪುನೀತ್ ರಾಜ್ಕುಮಾರ್ ನಿವಾಸಕ್ಕೆ ಭೇಟಿ ಕೊಟ್ಟಿದ್ದಾರೆ.
ರಾಹುಲ್, ಅಪ್ಪು ನಿವಾಸಕ್ಕೆ ಭೇಟಿ ಕೊಡುತ್ತಿದ್ದ ಹಿನ್ನೆಲೆ ಬಿಗಿ ಬಂದೋಬಸ್ತ್ ಮಾಡಲಾಗಿತ್ತು. ಈ ವೇಳೆ ಸುಮಾರು 15ಕ್ಕೂ ಹೆಚ್ಚು ಪೊಲೀಸರು ಅಪ್ಪು ನಿವಾಸದ ಬಳಿ ಇದ್ದರು. ಅಶ್ವಿನಿ ಪುನೀತ್ ರಾಜ್ಕುಮಾರ್ ಮತ್ತು ರಾಘಣ್ಣಗೆ ರಾಹುಲ್ ಗಾಂಧಿ