Select Your Language

Notifications

webdunia
webdunia
webdunia
webdunia

ಬಳಕೆಯಲ್ಲಿಲ್ಲದ ಪದ ಟ್ವೀಟ್ ಮಾಡಿ ಟ್ರೋಲ್ ಗೊಳಗಾದ ರಾಹುಲ್ ಗಾಂಧಿ

ಬಳಕೆಯಲ್ಲಿಲ್ಲದ ಪದ ಟ್ವೀಟ್ ಮಾಡಿ ಟ್ರೋಲ್ ಗೊಳಗಾದ ರಾಹುಲ್ ಗಾಂಧಿ
ನವದೆಹಲಿ , ಶುಕ್ರವಾರ, 17 ಮೇ 2019 (09:14 IST)
ನವದೆಹಲಿ: ರಾಹುಲ್ ಗಾಂಧಿ ಆಗಾಗ ಟ್ರೋಲ್ ಗೊಳಗಾಗುವುದು ಸಾಮಾನ್ಯವಾಗಿಬಿಟ್ಟಿದೆ. ಇದೀಗ ಬಳಕೆಯಲ್ಲಿಲ್ಲದ ಪದ ಟ್ವೀಟ್ ಮಾಡಿ ಆಕ್ಸ್ ಫರ್ಡ್ ನಿಂದ ಕಿವಿ ಹಿಂಡಿಸಿಕೊಂಡಿದ್ದಾರೆ.


ಸುಳ್ಳುಗಾರ ಎಂಬ ಪದ ಪ್ರಯೋಗ ಮಾಡಲು ರಾಹುಲ್ ಗಾಂಧಿ ‘Modilie’ ಎಂಬ ಪದ ಬಳಕೆ ಮಾಡಿದ್ದರು ಮತ್ತು ಈ ಪದವನ್ನು ಆಕ್ಸ್ ಫರ್ಡ್ ಡಿಕ್ಷನ್ನರಿಯಿಂದ ಬಳಸಿದಂತೆ ಚಿತ್ರ ಪ್ರಕಟಿಸಿದ್ದರು.

ಆದರೆ ಇದಕ್ಕೆ ತಕ್ಷಣವೇ ಟ್ವಿಟರ್‍ ಮೂಲಕ ಪ್ರತಿಕ್ರಿಯಿಸಿರುವ ಆಕ್ಸ್ ಫರ್ಡ್ ‘ನಮ್ಮ ಆಕ್ಸ್ ಫರ್ಡ್ ಲಿವಿಂಗ್ ಡಿಕ್ಷನರಿಯಲ್ಲಿ ಇಂತಹ ಯಾವುದೇ ಪದ ಬಳಕೆಯಲ್ಲಿಲ್ಲ’ ಎಂದು ಸ್ಪಷ್ಟನೆ ನೀಡಿದೆ.

ಆಕ್ಸ್ ಫರ್ಡ್ ಈ ರೀತಿ ಸ್ಪಷ್ಟನೆ ನೀಡುತ್ತಿದ್ದಂತೇ ಬಿಜೆಪಿ ರಾಹುಲ್ ಗಾಂಧಿಯನ್ನು ಲೇವಡಿ ಮಾಡಿದ್ದು ‘ಕಪಾಳ ಮೋಕ್ಷ’ ಎಂದು ಟ್ವೀಟ್ ಮಾಡಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ಚಂದ್ರ ಮೇಲ್ಮೈ ಮೇಲೆ ಕಾಲಿಡಲಿರುವ ಮಹಿಳಾ ಗಗನಯಾತ್ರಿ